ಕರ್ನಾಟಕ

karnataka

ETV Bharat / city

ಪರಿಚಿತನಿಂದ ವಂಚನೆ: ವಿದೇಶಿ ಪ್ರಜೆಯ ಹಣ ಮರಳಿಸಿದ ಮಂಗಳೂರು ಪೊಲೀಸರು - ಡಿಸಿಪಿ ಹರಿರಾಂ ಶಂಕರ್

ವಿದೇಶಿ ಪ್ರಜೆ ಯೋ ಫಿಲ್ ಎಂಬಾತ​ನಿಗೆ ಇಲ್ಲಿನ ವ್ಯಕ್ತಿಯೊಬ್ಬ 7.7 ಲಕ್ಷ ರೂ. ಹಣ ಪಡೆದು ವಂಚಿಸಿದ್ದ.

Yo Phil and Police Comissioner
ಯೋ ಫಿಲ್ ಮತ್ತು ಪೊಲೀಸ್​ ಕಮಿಶನರ್​ ಶಶಿಕುಮಾರ್​

By

Published : Apr 22, 2022, 2:39 PM IST

ಮಂಗಳೂರು: ವಂಚನೆಗೊಳಗಾದ 7.7 ಲಕ್ಷ ರೂ. ಹಣವನ್ನು ಮರಳಿ ತೆಗಿಸಿಕೊಟ್ಟ ಮಂಗಳೂರು ಪೊಲೀಸ್ ಇಲಾಖೆಗೆ ವಿದೇಶಿ ಪ್ರಜೆ ಯೋ ಫಿಲ್ ಧನ್ಯವಾದ ತಿಳಿಸಿದ್ದಾನೆ‌. ಫ್ರಾನ್ಸ್ ಮೂಲದ ಈತ ನಗರದ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದನು. ಚಿಲಿಂಬಿಯ ಅಪಾರ್ಟ್‌ಮೆಂಟ್​ನಲ್ಲಿ ವಾಸಿಸುತ್ತಿದ್ದು ತನಗೆ ಪರಿಚಿತನಾದ ವ್ಯಕ್ತಿಯೋರ್ವ ಈತನಿಂದ ಹೊಟೇಲ್ ಆರಂಭಿಸಲೆಂದು ಏಳು ಲಕ್ಷ ರೂಪಾಯಿ ಪಡೆದಿದ್ದು, ನಂತರ ಸಂಪರ್ಕ ಕೊನೆಗೊಳಿಸಿದ್ದನು.

ಯೋ ಫಿಲ್​ ಕ್ರೀಡಾಪಟುವಾಗಿದ್ದು ಮಂಗಳೂರಿನ ಸೈಕ್ಲಿಸ್ಟ್​ಗಳ ಸಂಪರ್ಕ ಹೊಂದಿದ್ದನು. ತನ್ನ ಪರಿಚಯಸ್ಥ ಸೈಕ್ಲಿಸ್ಟ್​ಗಳಲ್ಲಿ ತನಗಾದ ವಂಚನೆಯ ಬಗ್ಗೆ ತಿಳಿಸಿದ್ದಾನೆ. ಅವರ ಸಲಹೆಯಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ್ದಾನೆ. ಈ ಬಗ್ಗೆ ಮುತುವರ್ಜಿವಹಿಸಿ ತನಿಖೆ ನಡೆಸಿರುವ ಡಿಸಿಪಿ ಹರಿರಾಂ ಶಂಕರ್ ನೇತೃತ್ವದ ತಂಡ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದರು.

ವಂಚಕನ ತಂದೆ ಫ್ರಾನ್ಸ್ ಪ್ರಜೆಗೆ ಪುತ್ರ ವಂಚಿಸಿರುವ ಸಂಪೂರ್ಣ ಹಣ ವಾಪಸ್ ನೀಡಿದ್ದಾರೆ. ಆರೋಪಿಯನ್ನು ಬಂಧಿಸಲಾಗಿಲ್ಲ. ವಿಚಾರಣೆಗೆ ಕರೆದ ಸಂದರ್ಭ ಠಾಣೆಗೆ ಹಾಜರಾಗಬೇಕೆಂದು ನೋಟಿಸ್ ಕೊಟ್ಟು ಕಳುಹಿಸಲಾಗಿದೆ.

ಇದನ್ನೂ ಓದಿ:ರೋಹಿಣಿ ಕೋರ್ಟ್​ನಲ್ಲಿ ಮತ್ತೆ ಗುಂಡಿನ ಸದ್ದು.. ವಕೀಲರ ಮೇಲೆ ಗುಂಡು ಹಾರಿಸಿದ ತಪಸಣಾ ಅಧಿಕಾರಿ!

ABOUT THE AUTHOR

...view details