ಕರ್ನಾಟಕ

karnataka

ETV Bharat / city

ಮಂಗಳೂರು ಪೊಲೀಸ್ ಆಯುಕ್ತರಿಂದ 130 ರೌಡಿಶೀಟರ್​ಗಳ ಪರೇಡ್ - ರೌಡಿಶೀಟರ್​ಗಳ ಪರೇಡ್

ಜ. 27ರಂದು ಯುವಕರು ಪರಸ್ಪರ ಹೊಡೆದಾಟ ಮಾಡಿಕೊಂಡಿದ್ದ ಹಿನ್ನೆಲೆ ಪೊಲೀಸ್ ಆಯುಕ್ತರು ಸುರತ್ಕಲ್​ನಲ್ಲಿ ಪರೇಡ್ ನಡೆಸಿದರು. ಒಬ್ಬೊಬ್ಬ ರೌಡಿಗಳ ವಿಚಾರಣೆ ನಡೆಸಿದ ಪೊಲೀಸ್ ಆಯುಕ್ತರು, ಕೇಸ್ ಯಾವುದೆಂದು ಅವರ ಬಳಿಯೇ ಮಾಹಿತಿ ಪಡೆದರು.

mangalore-police-commissioner-rowdy-sheeter-pared
ರೌಡಿಶೀಟರ್​ಗಳ ಪರೇಡ್

By

Published : Jan 31, 2021, 8:55 PM IST

ಮಂಗಳೂರು: ಸುರತ್ಕಲ್​ನಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರಿಂದ 130 ಜನ ರೌಡಿಶೀಟರ್​ಗಳ ಪರೇಡ್ ನಡೆಯಿತು.

ರೌಡಿ ಶೀಟರ್​ಗಳಿಗೆ ಕ್ಲಾಸ್​​ ತೆಗೆದುಕೊಂಡ ಪೊಲೀಸ್ ಅಯುಕ್ತ ಎನ್.ಶಶಿಕುಮಾರ್, ನೀಟಾಗಿ ಕಟಿಂಗ್, ಶೇವಿಂಗ್ ಮಾಡಿಕೊಳ್ಳುವಂತೆ ರೌಡಿಗಳಿಗೆ ವಾರ್ನಿಂಗ್ ಮಾಡಿದರು.

ಮಂಗಳೂರು ಪೊಲೀಸ್ ಆಯುಕ್ತರಿಂದ 130 ರೌಡಿಶೀಟರ್​ಗಳ ಪರೇಡ್

ಜ. 27ರಂದು ಯುವಕರು ಪರಸ್ಪರ ಹೊಡೆದಾಟ ಮಾಡಿಕೊಂಡಿದ್ದ ಹಿನ್ನೆಲೆ ಪೊಲೀಸ್ ಆಯುಕ್ತರು ಸುರತ್ಕಲ್​ನಲ್ಲಿ ಪರೇಡ್ ನಡೆಸಿದರು. ಒಬ್ಬೊಬ್ಬ ರೌಡಿಗಳ ವಿಚಾರಣೆ ನಡೆಸಿದ ಪೊಲೀಸ್ ಆಯುಕ್ತರು, ಕೇಸ್ ಯಾವುದೆಂದು ಅವರ ಬಳಿಯೇ ಮಾಹಿತಿ ಪಡೆದರು.

'ನಮ್ಮದು ಗ್ಯಾಂಗ್ ವಾರ್' ಎಂದು ಹೇಳಿದ ರೌಡಶೀಟರ್​​ವೊಬ್ಬನಿಗೆ ಕ್ಲಾಸ್ ತೆಗೆದುಕೊಂಡ ಪೊಲೀಸ್ ಆಯುಕ್ತರು, 'ಏನು ದೊಡ್ಡ ಗ್ಯಾಂಗಾ ನಿನ್ನದು, ಎಲ್ಲಾ ಗ್ಯಾಂಗ್​ ಇಲ್ಲದಂಗೆ ಮಾಡ್ತೀನಿ' ಎಂದು ವಾರ್ನಿಂಗ್ ಕೊಟ್ಟರು. ದೇವರಿಗೆ ಕೂದಲು ಬಿಟ್ಟಿದ್ದೀನಿ ಎಂದು ಹೇಳಿದ ಮತ್ತೊಬ್ಬ ರೌಡಿಶೀಟರ್​ಗೆ 'ಕೆಟ್ಟ ಕೆಲಸ ಮಾಡಿ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರ ಮಾಡ್ತೀರಾ' ಅಂತಾ ಸಖತ್ ಕ್ಲಾಸ್ ತೆಗೆದುಕೊಂಡರು.

ABOUT THE AUTHOR

...view details