ಮಂಗಳೂರು: ನಗರದಲ್ಲಿ ಮನೆ ಮನೆಗೆ ತೆರಳಿ ಹಿಂದೂ ದೇವತೆಗಳ ಬಗ್ಗೆ ಅವಹೇಳಕಾರಿಯಾಗಿ ಬರೆಯಲ್ಪಟ್ಟ ಸಾಹಿತ್ಯ ಇರುವ ಪುಸ್ತಕಗಳನ್ನು ಹಂಚುತ್ತಿದ್ದಾರೆ ಎಂಬ ಆರೋಪದ ಮೇಲೆ ಕೇರಳದ ವ್ಯಕ್ತಿಯೋರ್ವನನ್ನು ಪಾಂಡೇಶ್ವರ ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ನಡೆದಿದೆ.
ನಗರದ ಪಾಂಡೇಶ್ವರದ ಕೇರಳ ಸಮಾಜ ಶಾಲೆಯ ಬಳಿ ಮತಾಂತರಕ್ಕೆ ಯತ್ನಿಸುತ್ತಿದ್ದಾನೆಂಬ ಆರೋಪದಡಿ ಕೇರಳದ ಕೊಟ್ಟಾಯಂ ನಿವಾಸಿ ರಾಜೇಯನ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ರಾಜೇಯನ್ ಮನೆ ಮನೆಗೆ ತೆರಳಿ ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿಯಾದ ಸಾಹಿತ್ಯವಿದ್ದ ಪುಸ್ತಕಗಳನ್ನು ಹಂಚುತ್ತಿದ್ದ ಎನ್ನಲಾಗಿದೆ.