ಕರ್ನಾಟಕ

karnataka

ETV Bharat / city

ಫಾಝಿಲ್ ಹತ್ಯೆ ಪ್ರಕರಣ: ಕೃತ್ಯಕ್ಕೆ ಬಳಸಿದ್ದ ಕಾರು ಪತ್ತೆ - ಮಂಗಳೂರು ಕೊಲೆ

ಫಾಝಿಲ್ ಹತ್ಯೆಗೆ ಬಳಸಿದ್ದ ಕಾರು ಪತ್ತೆ- ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪದ ಇನ್ನಾ ಗ್ರಾಮದ ಕಡೆಕುಂಜಾ ಎಂಬಲ್ಲಿ ಕಾರು ವಶಕ್ಕೆ - ಪೊಲೀಸರಿಂದ ಮಾಹಿತಿ

ಫಾಜಿಲ್ ಹತ್ಯೆ ಪ್ರಕರಣ: ಕೃತ್ಯಕ್ಕೆ ಬಳಸಿದ ಕಾರು ಪತ್ತೆ
ಫಾಜಿಲ್ ಹತ್ಯೆ ಪ್ರಕರಣ: ಕೃತ್ಯಕ್ಕೆ ಬಳಸಿದ ಕಾರು ಪತ್ತೆ

By

Published : Jul 31, 2022, 6:36 PM IST

ಮಂಗಳೂರು(ದಕ್ಷಿಣ ಕನ್ನಡ): ‌ಸುರತ್ಕಲ್​​ನಲ್ಲಿ ನಡೆದ ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದುಷ್ಕರ್ಮಿಗಳು ಕೃತ್ಯಕ್ಕೆ ಬಳಸಿದ ಕಾರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪದ ಇನ್ನಾ ಗ್ರಾಮದ ಕಡೆಕುಂಜಾ ಎಂಬಲ್ಲಿ ಪತ್ತೆಯಾದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗುರುವಾರದಂದು ಸುರತ್ಕಲ್​​ನಲ್ಲಿ ಅಂಗಡಿಯೊಂದರ ಎದುರು ನಿಂತಿದ್ದ ಕಾಟಿಪಳ್ಳ ಮಂಗಳಪೇಟೆ ನಿವಾಸಿ ಫಾಝಿಲ್ ಹತ್ಯೆಗೆ ದುಷ್ಕರ್ಮಿಗಳು ಕಾರಿನಲ್ಲಿ ಬಂದಿದ್ದರು. ಕೃತ್ಯದ ಬಳಿಕ ಹಂತಕರು ತಪ್ಪಿಸಿಕೊಂಡಿದ್ದರು. ಆದ್ರೆ ಅವರು ಬಳಸಿದ್ದ ಕಾರು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆದ್ದರಿಂದ ಪ್ರಕರಣದ ಆರೋಪಿಗಳ ಬಲೆಗೆ ಕಾರಿನ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

ಈಗಾಗಲೇ ಇಂದು ಕಾರನ್ನು ಬಾಡಿಗೆಗೆ ನೀಡಿದ್ದ ಮಾಲೀಕ ಅಜಿತ್ ಕ್ಯಾಸ್ತ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಫಾಝಿಲ್ ಕೊಲೆ ಪ್ರಕರಣಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆಯಾದ ಎರಡು ದಿನದಲ್ಲೇ ​ಫಾಝಿಲ್​ ಹತ್ಯೆಗೀಡಾಗಿದ್ದರು.

ABOUT THE AUTHOR

...view details