ಮಂಗಳೂರು: ಕೆಎಸ್ಆರ್ಟಿಸಿ ಮಂಗಳೂರು ವಿಭಾಗದಿಂದ ಮಂತ್ರಾಲಯಕ್ಕೆ ಸಂಚಾರ ಮಾಡಲಿರುವ ಮೊದಲ ನಾನ್ ಎಸಿ ಸ್ಲೀಪರ್ ಬಸ್ಗೆ ಶಾಸಕ ವೇದವ್ಯಾಸ ಕಾಮತ್ ಚಾಲನೆ ನೀಡಿದರು. ಮೊದಲ ದಿನವಾದ ಇಂದು ಮಂಗಳೂರಿನಿಂದ ಮಂತ್ರಾಲಯಕ್ಕೆ ಇಬ್ಬರು ಪ್ರಯಾಣ ಬೆಳೆಸಿದ್ದಾರೆ.
ಮಂಗಳೂರು-ಮಂತ್ರಾಲಯ ಕೆಎಸ್ಆರ್ಟಿಸಿ ಬಸ್ ಸಂಚಾರಕ್ಕೆ ಚಾಲನೆ ಓದಿ: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಹಣ ಪಾವತಿಸಿ: ಸರ್ಕಾರಕ್ಕೆ ಹೈಕೋರ್ಟ್ ತಾಕೀತು
ಈ ಬಸ್ ಮಧ್ಯಾಹ್ನ 3.30 ಕ್ಕೆ ಮಂಗಳೂರಿನಿಂದ ಹೊರಟು, ಮರುದಿನ ಬೆಳಗ್ಗೆ 6 ಗಂಟೆಗೆ ಮಂತ್ರಾಲಯ ತಲುಪಲಿದೆ. ಮಂತ್ರಾಲಯದಿಂದ ಸಂಜೆ 5.30ಕ್ಕೆ ಹೊರಟು ಬೆಳಗ್ಗೆ 7.30ಕ್ಕೆ ಮಂಗಳೂರು ತಲುಪಲಿದೆ. ಮಂಗಳೂರಿನಿಂದ ಹೊರಟ ಈ ಬಸ್ ಉಡುಪಿ-ಕುಂದಾಪುರ ಮಾರ್ಗವಾಗಿ ಶಿವಮೊಗ್ಗ, ಚಿತ್ರದುರ್ಗ ತಲುಪಿ, ಬಳ್ಳಾರಿ ಮಾರ್ಗವಾಗಿ ಆದೋನಿ ಮಾಧವರಂ ಕ್ರಾಸ್ ಮೂಲಕ ಮಂತ್ರಾಲಯ ತಲುಪಲಿದೆ.
ಚಾಲನೆ ನೀಡಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಹಲವು ವರ್ಷಗಳ ಮಂಗಳೂರು-ಮಂತ್ರಾಲಯ ಬಸ್ ಸಂಚಾರ ಬೇಡಿಕೆಗೆ ಇಂದು ಕೆಎಸ್ಆರ್ಟಿಸಿ ಚಾಲನೆ ನೀಡಿದೆ. ಈ ಮೂಲಕ 950 ರೂ. ಪ್ರಯಾಣ ದರದಲ್ಲಿ ಆಸಕ್ತರು ಮಂತ್ರಾಲಯಕ್ಕೆ ತೆರಳಿ ಶ್ರೀ ರಾಘವೇಂದ್ರ ಸ್ವಾಮೀಜಿ ದರ್ಶನ ಪಡೆಯಲು ಅವಕಾಶ ನೀಡಲಾಗಿದೆ. ಈ ಬಸ್ ನಲ್ಲಿ ಮಂತ್ರಾಲಯ ದರ್ಶನ ಮಾಡುವವರ ಪ್ರಯಾಣ ಸುಖಕರವಾಗಿ, ಶುಭವಾಗಲಿ ಎಂದು ಹಾರೈಸಿದರು.