ಕರ್ನಾಟಕ

karnataka

ETV Bharat / city

ದಕ್ಷಿಣ ಕನ್ನಡ ಲೋಕಲ್ ರಿಸಲ್ಟ್​​- ಮೂಡುಬಿದಿರೆ, ಸುಳ್ಯ ಬಿಜೆಪಿ.. ಮುಲ್ಕಿ ಪಟ್ಟಣದಲ್ಲಿ ಮೈತ್ರಿಗೆ ಅಧಿಕಾರ - undefined

ಸುಮಾರು ಮೂರು ದಶಕಗಳ ಬಳಿಕ ಮೂಡುಬಿದಿರೆ ಪುರಸಭೆ ಬಿಜೆಪಿ ಪಾಲಾಗಿದೆ. ಸುಳ್ಯಾ ಪಟ್ಟಣ ಪಂಚಾಯತ್​ನ 20 ಕ್ಷೇತ್ರಗಳಲ್ಲಿ‌ 14 ಸ್ಥಾನ ಬಿಜೆಪಿ, 4 ಕಾಂಗ್ರೆಸ್ ಹಾಗೂ 2 ಪಕ್ಷೇತರರು ವಿಜಯ ಮಾಲೆ ಧರಿಸಿದ್ದಾರೆ.

ಮಂಗಳೂರು ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ ಪ್ರಕಟ

By

Published : May 31, 2019, 12:00 PM IST

Updated : May 31, 2019, 12:18 PM IST

ಮಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರಬಂದಿದೆ. ಮೂಡುಬಿದಿರೆ ಪುರಸಭೆ ಹಾಗೂ ಸುಳ್ಯಾ ಪಟ್ಟಣ ಪಂಚಾಯತ್ ಬಿಜೆಪಿ ತೆಕ್ಕೆಗೆ ಬಂದಿದೆ. ಮುಲ್ಕಿ ಪಟ್ಟಣ ಪಂಚಾಯತ್ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಪಾಲಾಗಿದೆ.

ಮಂಗಳೂರು ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ ಪ್ರಕಟ

ಮೂಡುಬಿದಿರೆ ಪುರಸಭೆಯಲ್ಲಿ 23 ಸ್ಥಾನದಲ್ಲಿ‌ 12 ಸ್ಥಾನ ಬಿಜೆಪಿಗೆ ಹಾಗೂ 11 ಸ್ಥಾನ ಕಾಂಗ್ರೆಸ್ ಗೆದ್ದುಕೊಂಡಿದೆ. ಇದರಿಂದ ಸುಮಾರು ಮೂರು ದಶಕಗಳ ಬಳಿಕ ಮೂಡುಬಿದಿರೆ ಪುರಸಭೆ ಬಿಜೆಪಿ ಪಾಲಾಗಿದೆ.ಸುಳ್ಯಾ ಪಟ್ಟಣ ಪಂಚಾಯತ್​ನ 20 ಕ್ಷೇತ್ರಗಳಲ್ಲಿ‌ 14 ಸ್ಥಾನ ಬಿಜೆಪಿ, 4 ಸ್ಥಾನ ಕಾಂಗ್ರೆಸ್ ಹಾಗೂ 2 ಪಕ್ಷೇತರರು ವಿಜಯ ಮಾಲೆ ಧರಿಸಿದ್ದಾರೆ.

ಮುಲ್ಕಿ ಪಟ್ಟಣ ಪಂಚಾಯತ್​ನಲ್ಲಿ ಒಟ್ಟು 18 ಕ್ಷೇತ್ರಗಳಲ್ಲಿ ಬಿಜೆಪಿ ಗೆ 8, ಕಾಂಗ್ರೆಸ್ 9 ಹಾಗೂ ಜೆಡಿಎಸ್ ಒಂದು ಸ್ಥಾನಗಳಿಸಿದೆ. ಆಡಳಿತದ ಚುಕ್ಕಾಣಿಯನ್ನು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷ ಹಿಡಿದುಕೊಂಡಿದೆ. ಮುಲ್ಕಿಯಲ್ಕಿ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಿದ್ದರೂ ಕೂಡ ಅಧಿಕಾರ ಪಡೆಯುವ ದಿನ ಶಾಸಕರು‌ ಹಾಗೂ ಸಂಸದರ ಮತವೂ ಲೆಕ್ಕಕ್ಕೆ ಬರುತ್ತದೆ. ಆದ್ದರಿಂದ ಮತ್ತಷ್ಟು ಕುತೂಹಲ ಗರಿಗೆದರಿದೆ.

Last Updated : May 31, 2019, 12:18 PM IST

For All Latest Updates

TAGGED:

ABOUT THE AUTHOR

...view details