ಕರ್ನಾಟಕ

karnataka

ETV Bharat / city

ಮಂಗಳೂರು ಗೋಲಿಬಾರ್; ಸಾಕ್ಷ್ಯ, ಹೇಳಿಕೆ ನೀಡಲು ಆಗಸ್ಟ್ 11ಕ್ಕೆ ಅಂತಿಮ ಅವಕಾಶ

ಮಂಗಳೂರಿನಲ್ಲಿ 2019 ಡಿಸೆಂಬರ್ 19 ರಂದು ಸಿಎಎ, ಎನ್​ಆರ್​ಸಿ ವಿರುದ್ಧದ ಪ್ರತಿಭಟನೆ ವೇಳೆ ಗೋಲಿಬಾರ್ ಸಂಭವಿಸಿ ನೌಶೀನ್ ಮತ್ತು ಜಲೀಲ್ ಕುದ್ರೋಳಿ ಎಂಬ ಇಬ್ಬರು ಮೃತಪಟ್ಟಿದ್ದರು. ಈ ಬಗ್ಗೆ ಸರಕಾರ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರ ಮೂಲಕ ಮ್ಯಾಜಿಸ್ಟೇರಿಯಲ್  ತನಿಖೆಗೆ ಆದೇಶಿಸಿತ್ತು.

By

Published : Aug 7, 2020, 9:37 PM IST

Mangalore Golibar opportunity to give testimony or statement
ಮಂಗಳೂರು ಗೋಲಿಬಾರ್, ಸಾಕ್ಷ್ಯ ಅಥವಾ ಹೇಳಿಕೆ ನೀಡಲು ಆಗಸ್ಟ್ 11ಕ್ಕೆ ಅಂತಿಮ ಅವಕಾಶ

ಮಂಗಳೂರು:ನಗರದಲ್ಲಿ ನಡೆದ ಗೋಲಿಬಾರ್ ಘಟನೆಗೆ ಸಂಬಂಧಿಸಿದಂತೆ ಸಾಕ್ಷ್ಯ ಅಥವಾ ಹೇಳಿಕೆಯನ್ನು ನೀಡಲು ಅಂತಿಮ ಅವಕಾಶವನ್ನು ನೀಡಲಾಗಿದೆ.

ಮಂಗಳೂರಿನಲ್ಲಿ 2019 ಡಿಸೆಂಬರ್ 19 ರಂದು ಸಿಎಎ, ಎನ್​ಆರ್​ಸಿ ವಿರುದ್ಧ ಪ್ರತಿಭಟನೆ ವೇಳೆ ಗೋಲಿಬಾರ್ ಸಂಭವಿಸಿ ನೌಶೀನ್ ಮತ್ತು ಜಲೀಲ್ ಕುದ್ರೋಳಿ ಎಂಬ ಇಬ್ಬರು ಮೃತಪಟ್ಟಿದ್ದರು. ಈ ಬಗ್ಗೆ ಸರಕಾರ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರ ಮೂಲಕ ಮ್ಯಾಜಿಸ್ಟೇರಿಯಲ್ ತನಿಖೆಗೆ ಆದೇಶಿಸಿತ್ತು. ಕೊರೊನಾ ಕಾರಣದಿಂದ ಮ್ಯಾಜಿಸ್ಟೇರಿಯಲ್ ವಿಚಾರಣೆ ಪೂರ್ಣವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಘಟನೆಗೆ ಸಂಬಂಧಿಸಿದಂತೆ ಸಾಕ್ಷ್ಯ ಅಥವಾ ಹೇಳಿಕೆ ಪ್ರಕಟಿಸಲು ಅಂತಿಮ ದಿನಾಂಕ ನಿಗದಿಪಡಿಸಲಾಗಿದೆ.

ಆಗಸ್ಟ್ 11 ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಾಕ್ಷ್ಯ ಹೇಳಲು ಅವಕಾಶವಿದೆ. ಅಂದು ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿದ ಅಥವಾ ಘಟನೆ ಬಗ್ಗೆ ಮಾಹಿತಿಯುಳ್ಳ ಸಾರ್ವಜನಿಕರು ಸಾಕ್ಷ್ಯ ಹೇಳಬಹುದಾಗಿದೆ. ಅದರ ಬಳಿಕ ಸಾರ್ವಜನಿಕರಿಂದ ಯಾವುದೇ ಸಾಕ್ಷ್ಯ ಅಥವಾ ಹೇಳಿಕೆಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.

For All Latest Updates

ABOUT THE AUTHOR

...view details