ಕರ್ನಾಟಕ

karnataka

ETV Bharat / city

ಮಂಗಳೂರಲ್ಲಿ ಇಳಿಯಬೇಕಿದ್ದ ಎರಡು ವಿಮಾನಗಳು ಬೆಂಗಳೂರಿಗೆ ಡೈವರ್ಟ್! - ಮಂಗಳೂರಿನ ವಿಮಾನ ಬೆಂಗಳೂರಿಗೆ ಡೈವರ್ಟ್

ಹವಾಮಾನ ವೈಪರೀತ್ಯದಿಂದಾಗಿ ಮಂಗಳೂರಿಗೆ ಆಗಮಿಸುತ್ತಿದ್ದ ಎರಡು ವಿಮಾನಗಳನ್ನು ಬೆಂಗಳೂರಿಗೆ ಡೈವರ್ಟ್ ಮಾಡಲಾಗಿತ್ತು. ವಾತಾವರಣ ಸರಿಯಾದ ಬಳಿಕ ವಿಮಾನಗಳು ಮತ್ತೆ ಮಂಗಳೂರಿಗೆ ಪ್ರಯಾಣಿಸಿದವು.

airport
airport

By

Published : Jul 25, 2022, 10:41 PM IST

ಮಂಗಳೂರು: ಪ್ರತಿಕೂಲ ಹವಾಮಾನದ ಕಾರಣ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಎರಡು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳನ್ನು ಬೆಂಗಳೂರಿಗೆ ಡೈವರ್ಟ್ ಮಾಡಲಾಗಿತ್ತು. ಅಬುಧಾಬಿಯಿಂದ ಮಂಗಳೂರಿಗೆ ಬಂದ IX 0816 ಮತ್ತು ದುಬೈನಿಂದ ಮಂಗಳೂರಿಗೆ ಬಂದ IX 0384 ವಿಮಾನವನ್ನು ಪ್ರತಿಕೂಲ ಹವಾಮಾನದ ಕಾರಣದಿಂದ ಡೈವರ್ಟ್ ಮಾಡಲಾಗಿತ್ತು.

ಅಬುಧಾಬಿಯಿಂದ ಬಂದ ವಿಮಾನದಲ್ಲಿ 145 ಪ್ರಯಾಣಿಕರಿದ್ದರೆ, ದುಬೈನಿಂದ ಬಂದ ವಿಮಾನದಲ್ಲಿ 163 ಪ್ರಯಾಣಿಕರಿದ್ದರು. ಎರಡೂ ವಿಮಾನಗಳಲ್ಲಿ ತಲಾ ಆರು ಸಿಬ್ಬಂದಿ ಇದ್ದರು. ಹವಾಮಾನ ಸರಿಯಾದ ಬಳಿಕ ದುಬೈಯಿಂದ ಆಗಮಿಸಿದ ವಿಮಾನ ಸಂಜೆ 4.35 ಕ್ಕೆ ಮಂಗಳೂರಿಗೆ ಬಂದಿಳಿಯಿತು. ಅದೇ ರೀತಿ ಅಬುಧಾಬಿಯಿಂದ ಆಗಮಿಸಿದ ವಿಮಾನವು 5 ಗಂಟೆಗೆ ಮಂಗಳೂರು ತಲುಪಿದೆ.

ABOUT THE AUTHOR

...view details