ಕರ್ನಾಟಕ

karnataka

ETV Bharat / city

ಮಂಗಳೂರು-ದೆಹಲಿ ನೇರ ವಿಮಾನ ಸೇವೆ ಇಂದಿನಿಂದ ಮತ್ತೆ ಆರಂಭ.. - ಸ್ಪೈಸ್ ಜೆಟ್ ವಿಮಾನ

ರಾಜಧಾನಿ ನವದೆಹಲಿಗೆ ಮಂಗಳೂರಿನಿಂದ ಒಂದು ಜೆಟ್‌ ಏರ್‌ವೇಸ್ ಸಂಚರಿಸುತ್ತಿತ್ತು. ಕೆಲವು ತಿಂಗಳಿನಿಂದ ಆ ವಿಮಾನ ತನ್ನ ಸೇವೆಯನ್ನು ಸ್ಥಗಿತಗೊಳಿಸಿತ್ತು. ಸದ್ಯ ಮಂಗಳೂರು-ದೆಹಲಿ ನೇರ ವಿಮಾನ ಸೇವೆಯು ಇಂದು ಸ್ಪೈಸ್ ಜೆಟ್ ವಿಮಾನ ಹಾರಾಟದ ಮೂಲಕ ಮತ್ತೊಮ್ಮೆ ಆರಂಭವಾಗಿದೆ.

ಮಂಗಳೂರು-ದೆಹಲಿ ನೇರ ವಿಮಾನ ಸೇವೆ ಇಂದಿನಿಂದ ಮತ್ತೆ ಆರಂಭ

By

Published : Aug 4, 2019, 11:12 PM IST

ಮಂಗಳೂರು:ಕೆಲವು ತಿಂಗಳಿನಿಂದ ಸ್ಥಗಿತವಾಗಿದ್ದ ಮಂಗಳೂರು-ದೆಹಲಿ ನೇರ ವಿಮಾನ ಸೇವೆಯು ಇಂದು ಸ್ಪೈಸ್ ಜೆಟ್ ವಿಮಾನ ಹಾರಾಟದ ಮೂಲಕ ಮತ್ತೊಮ್ಮೆ ಆರಂಭವಾಯಿತು.

1ನೇ ಬೋರ್ಡಿಂಗ್ ಪಾಸ್​ನ ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕ ವಿ ವಿ ರಾವ್ ಅವರು ಪ್ರಯಾಣಿಕರಿಗೆ ಹಸ್ತಾಂತರಿಸಿದರು.

ಮಂಗಳೂರು-ದೆಹಲಿ ನೇರ ವಿಮಾನ ಸೇವೆ ಇಂದಿನಿಂದ ಮತ್ತೆ ಆರಂಭ

ಈ ಹಿಂದೆ ರಾಜಧಾನಿ ನವದೆಹಲಿಗೆ ಮಂಗಳೂರಿನಿಂದ ಒಂದು ಜೆಟ್‌ ಏರ್‌ವೇಸ್ ಸಂಚರಿಸುತ್ತಿತ್ತು. ಕೆಲವು ತಿಂಗಳಿನಿಂದ ಆ ವಿಮಾನ ತನ್ನ ಸೇವೆಯನ್ನು ಸ್ಥಗಿತಗೊಳಿಸಿತ್ತು. ಹೀಗಾಗಿ ಮಂಗಳೂರಿನಿಂದ ದೆಹಲಿಗೆ ನೇರ ವಿಮಾನವೇ ಇರಲಿಲ್ಲ.

ABOUT THE AUTHOR

...view details