ಕರ್ನಾಟಕ

karnataka

ETV Bharat / city

ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವರ್ಗಾವಣೆ - Mangalore city news

ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶಿಸಿದೆ. ಪೊಲೀಸ್ ಆಯುಕ್ತರ ತೆರವಾದ ಸ್ಥಾನಕ್ಕೆ ಎನ್​.ಶಶಿಕುಮಾರ್ ಅವರನ್ನು ನೇಮಕ ಮಾಡಲಾಗಿದೆ.

Vikas Kumar
ವಿಕಾಸ್ ಕುಮಾರ್

By

Published : Dec 31, 2020, 10:19 PM IST

ಮಂಗಳೂರು: ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಇಂದು‌ ಆದೇಶಿಸಿದೆ‌.

ವಿಕಾಸ್ ಕುಮಾರ್ ಅವರನ್ನು ಈ ತಕ್ಷಣದಿಂದಲೇ ರಾಜ್ಯ ರಿಸರ್ವ್ ಪೊಲೀಸ್​ನ ಡೆಪ್ಯೂಟಿ ಇನ್ಸ್‌ಪೆಕ್ಟರ್ ಆಫ್ ಜನರಲ್ ಪೊಲೀಸ್ ಆಗಿ ನೇಮಕ ಮಾಡಲಾಗಿದೆ. ವಿಕಾಸ್ ಕುಮಾರ್ ಅವರು 2020 ಜೂನ್ 29ರಂದು ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದರು. ಆರು ತಿಂಗಳ ಕಾಲ ಅವರು ಮಂಗಳೂರಿನಲ್ಲಿ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.

ಇದೀಗ ಮಂಗಳೂರು ನಗರ ಪೊಲೀಸ್ ಆಯುಕ್ತರ ತೆರವಾದ ಸ್ಥಾನಕ್ಕೆ ಎನ್​.ಶಶಿಕುಮಾರ್ ಅವರನ್ನು ನೇಮಕ ಮಾಡಲಾಗಿದೆ.

For All Latest Updates

TAGGED:

ABOUT THE AUTHOR

...view details