ಕರ್ನಾಟಕ

karnataka

ETV Bharat / city

Mangalore:  ಆದಿತ್ಯ ರಾವ್ ಇರಿಸಿದ್ದ ಬಾಂಬ್ ಪತ್ತೆಹಚ್ಚಿದ್ದ 'ಲೀನಾ' ಇನ್ನಿಲ್ಲ - ಮಂಗಳೂರು ಬಾಂಬ್​​ ಸ್ಕ್ವಾಡ್​ ಶ್ವಾನ ಸಾವು

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(CISF) ಶ್ವಾನ ದಳದಲ್ಲಿ ಸ್ಪೋಟಕ ಪತ್ತೆ ಕಾರ್ಯಾಚರಣೆಯಲ್ಲಿ ಮಿಂಚಿನ ಹಾಗೆ ಕಾರ್ಯ ನಿರ್ವಹಿಸುತ್ತಿದ್ದ ಶ್ವಾನ ಲೀನಾ ಅನಾರೋಗ್ಯ ಕಾರಣದಿಂದ ಮೃತಪಟ್ಟಿದೆ. ಲೀನಾ ಅಂತ್ಯಕ್ರಿಯೆಯನ್ನು ವಿಮಾನ ನಿಲ್ದಾಣ ಅವರಣದಲ್ಲಿ ಸಕಲ ಸೇನಾ ಗೌರವದೊಂದಿಗೆ ನೆರವೇರಿಸಲಾಯಿತು.

mangalore-cisf-dog-leena-death
ಶ್ವಾನ ಲೀನಾ

By

Published : Nov 22, 2021, 11:05 AM IST

ಮಂಗಳೂರು: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆದಿತ್ಯ ರಾವ್ ಇರಿಸಿದ್ದ ಬಾಂಬ್ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದ ಲೀನಾ ಎಂಬ ಶ್ವಾನ ಅನಾರೋಗ್ಯದಿಂದ ಭಾನುವಾರ ಮೃತಪಟ್ಟಿದ್ದು, ಸಲಕ ಸೇನಾ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು.

ಆದಿತ್ಯ ರಾವ್ ಇರಿಸಿದ್ದ ಬಾಂಬ್ ಪತ್ತೆಹಚ್ಚಿದ್ದ 'ಲೀನಾ' ಇನ್ನಿಲ್ಲ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ಎಫ್) ಶ್ವಾನ ದಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಲ್ಯಾಬ್ರಡಾರ್ ತಳಿಯ ಶ್ವಾನ ಲೀನಾ ಅನಾರೋಗ್ಯದಿಂದ ಮೃತಪಟ್ಟಿದೆ. ಬಾಂಬ್ ಪತ್ತೆ ಕಾರ್ಯದಲ್ಲಿ ನಿಷ್ಣಾತೆಯಾಗಿರುವ ಲೀನಾಗೆ 8 ವರ್ಷ ಒಂಬತ್ತು ತಿಂಗಳು ವಯಸ್ಸಾಗಿತ್ತು.

ಕಿಡ್ನಿ ಸಂಬಂಧಿಸಿದ ರೋಗದಿಂದ ಬಳಲುತ್ತಿದ್ದ ಶ್ವಾನ ಫೆ.16ರಿಂದ ಆಹಾರ ಸೇವನೆ ಮಾಡದೇ ಗ್ಲೂಕೋಸ್ ಮಾತ್ರ ಸೇವಿಸುತ್ತಿತ್ತು. ಆದರೆ, ಭಾನುವಾರ ಮೃತಪಟ್ಟಿದೆ. ಲೀನಾ ಅಂತ್ಯ ಸಂಸ್ಕಾರವನ್ನು ರವಿವಾರ ಸಕಲ ಸೇನಾ ಗೌರವದೊಂದಿಗೆ ವಿಮಾನ ನಿಲ್ದಾಣದ ಆವರಣದಲ್ಲಿ ನಡೆಸಲಾಗಿದೆ.

ಲೀನಾ ಅಂತ್ಯ ಕ್ರಿಯೆ

ಚಾಲಾಕಿ ಲೀನಾ: 2013ರ ಮೇ 5ರಂದು ಜನಿಸಿರುವ ಲೀನಾ ರಾಂಚಿಯಲ್ಲಿ ಸ್ಫೋಟಕ ಪತ್ತೆ ಕಾರ್ಯಾಚರಣೆ ತರಬೇತಿ ಪಡೆದಿತ್ತು. ಆ ಬಳಿಕ ಮಂಗಳೂರು ವಿಮಾನ ನಿಲ್ದಾಣದ ಶ್ವಾನದಳಕ್ಕೆ ಸೇರ್ಪಡೆಗೊಂಡಿತ್ತು. ಶ್ವಾನದಳ ವಿಭಾಗದ 4 ಶ್ವಾನಗಳಲ್ಲಿಯೇ ಲೀನಾ ಅತ್ಯಂತ ಚುರುಕಿನ ಶ್ವಾನವಾಗಿತ್ತು. ಸಿಐಎಸ್ಎಫ್ ಸಿಬ್ಬಂದಿ ಈಕೆಯನ್ನು ಡೋಲಿ ಎಂದು ಕರೆಯುತ್ತಿದ್ದರು. ಲೀನಾ ಅನಾರೋಗ್ಯದ ಹಿನ್ನೆಲೆಯಲ್ಲಿ ಬೇರೊಂದು ಶ್ವಾನವನ್ನು ವಿಮಾನ ನಿಲ್ದಾಣದ ಶ್ವಾನದಳ ವಿಭಾಗಕ್ಕೆ ಸೇರ್ಪಡೆಗೊಳಿಸಿ ರಾಂಚಿಯಲ್ಲಿ ತರಬೇತಿ ನೀಡಲಾಗುತ್ತಿದೆ.

ABOUT THE AUTHOR

...view details