ಮಂಗಳೂರು(ದಕ್ಷಿಣ ಕನ್ನಡ) :ಬುರ್ಕಾದ ಬಟನ್ನೊಳಗಡೆ 100 ಗ್ರಾಂ ಚಿನ್ನವನ್ನು ಅಡಗಿಸಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಯಾಣಿಕನನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ. ದುಬೈನಿಂದ ಮಂಗಳೂರಿಗೆ ನಿನ್ನೆ ವಿಮಾನದಲ್ಲಿ ಬಂದಿದ್ದ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಅಕ್ರಮವಾಗಿ ಚಿನ್ನ ಸಾಗಿಸುತ್ತಿರುವುದು ಪತ್ತೆಯಾಗಿದೆ.
ಬುರ್ಕಾ ಬಟನ್ನೊಳಗಡೆ 100 ಗ್ರಾಂ ಚಿನ್ನ ಸಾಗಾಟ : ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕ ವಶಕ್ಕೆ! - gold smuggling
ಅಕ್ರಮವಾಗಿ ಸಾಗಿಸಲಾಗ್ತಿದ್ದ 5,34,000 ರೂ. ಮೌಲ್ಯದ 100 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಚಿನ್ನ ಮತ್ತು ಪ್ರಯಾಣಿಕನನ್ನು ವಶಕ್ಕೆ ಪಡೆದುಕೊಂಡ ಕಸ್ಟಮ್ ಅಧಿಕಾರಿಗಳು ವಿಚಾರಣೆ ಮುಂದುವರಿಸಿದ್ದಾರೆ..

ಬುರ್ಕಾ ಬಟನ್ನೊಳಗಡೆ 100 ಗ್ರಾಂ ಚಿನ್ನ ಸಾಗಾಟ
ಇದನ್ನೂ ಓದಿ:ಮೃತ ಗುತ್ತಿಗೆದಾರ ಸಂತೋಷ್ ಪಾಟೀಲ್ ಕುಟುಂಬಸ್ಥರಿಂದ ತಿಥಿ ಕಾರ್ಯ
ಈ ಪ್ರಯಾಣಿಕ ಸಾಗಾಟ ಮಾಡುತ್ತಿದ್ದ ಬುರ್ಕಾವನ್ನು ತಪಾಸಣೆ ನಡೆಸಿದಾಗ, ಬುರ್ಕಾ ಬಟನ್ನೊಳಗಡೆ ಉಂಗುರದಾಕಾರದ ಚಿನ್ನವನ್ನು ಅಡಗಿಸಿಡಲಾಗಿತ್ತು. ಈ ರೀತಿ ಅಡಗಿಸಿ ಸಾಗಾಟ ಮಾಡುತ್ತಿದ್ದ 5,34,000 ರೂ. ಮೌಲ್ಯದ 100 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಚಿನ್ನ ಮತ್ತು ಪ್ರಯಾಣಿಕನನ್ನು ವಶಕ್ಕೆ ಪಡೆದುಕೊಂಡ ಕಸ್ಟಮ್ ಅಧಿಕಾರಿಗಳು ವಿಚಾರಣೆ ಮುಂದುವರಿಸಿದ್ದಾರೆ.