ಕರ್ನಾಟಕ

karnataka

ETV Bharat / city

ಮಂಗಳೂರು ಕಮಿಷನರೇಟ್​ನ 133 ಪೊಲೀಸ್​ ಕಾನ್ಸ್​ಟೇಬಲ್​ಗಳಿಗೆ ಏಕಕಾಲಕ್ಕೆ ಮುಂಬಡ್ತಿ - Managlore commissionerates promotion

ಮಂಗಳೂರು ಕಮಿಷನರೇಟ್ ಅಸ್ತಿತ್ವಕ್ಕೆ ಬಂದು 11 ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ 133 ಪೊಲೀಸ್ ಸಿಬ್ಬಂದಿ ಕೇವಲ 5 ವರ್ಷ 10 ದಿನಗಳಲ್ಲಿಯೇ ಮುಂಬಡ್ತಿ ಪಡೆದಿದ್ದಾರೆ.

managlore commissionerates promoted
ಹೆಡ್​ಕಾನ್​ಸ್ಟೇಬಲ್​ಗಳಾಗಿ ಬಡ್ತಿ

By

Published : Nov 28, 2021, 12:12 PM IST

ಮಂಗಳೂರು:ಮಂಗಳೂರು ನಗರ ಪೊಲೀಸ್ ಕಮಿಷನರೇಟ್​ನ 133 ಪೊಲೀಸ್ ಪೇದೆಗಳಿಗೆ ಹೆಡ್​ಕಾನ್​ಸ್ಟೇಬಲ್​ ಹುದ್ದೆಗೆ ಬಡ್ತಿ ನೀಡಲಾಗಿದೆ. ಇಲ್ಲಿನ ಪೊಲೀಸ್ ಆಯುಕ್ತರ ಕಚೇರಿ ಮುಂಭಾಗ ಪೊಲೀಸ್ ಕಮಿಷನರ್ ಹಾಗೂ ಪೊಲೀಸ್ ಅಧಿಕಾರಿಗಳು ಬ್ಯಾಡ್ಜ್ ನೀಡುವ ಮೂಲಕ ಮುಂಬಡ್ತಿ ಘೋಷಿಸಿದರು.

ಮಂಗಳೂರು ಕಮಿಷನರೇಟ್ ಅಸ್ತಿತ್ವಕ್ಕೆ ಬಂದು 11 ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ 133 ಪೊಲೀಸ್ ಸಿಬ್ಬಂದಿ ಕೇವಲ 5 ವರ್ಷ 10 ದಿನಗಳಲ್ಲಿಯೇ ಬಡ್ತಿ ಪಡೆದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಳ್ಳುವವರ ಕಡಿಮೆ ಸಂಖ್ಯೆ ಕಡಿಮೆ ಇದೆ. ಇದೀಗ ಪೊಲೀಸ್ ಕಾನ್​ಸ್ಟೇಬಲ್​ಗಳಿಗೆ ಬಡ್ತಿ ನೀಡಿದ್ದು, ಯುವಕರು ಪೊಲೀಸ್ ಇಲಾಖೆ ಸೇರ್ಪಡೆಗೆ ಉತ್ತೇಜನ ನೀಡಲಿದೆ.

ಇದನ್ನೂ ಓದಿ: ಒಮಿಕ್ರೋನ್ ಬಾಧಿತ ದೇಶಗಳ ಪ್ರಜೆಗಳಿಗೆ ನಿರ್ಬಂಧ: ಕೇಂದ್ರಕ್ಕೂ ಮನವಿ ಮಾಡಿದ ಸಿಎಂ ಬೊಮ್ಮಾಯಿ

ರಾಜ್ಯದ ಯಾವ ಜಿಲ್ಲೆಯಲ್ಲೂ ಇಷ್ಟು ತ್ವರಿತಗತಿಯಲ್ಲಿ ಯಾರಿಗೂ ಬಡ್ತಿ ನೀಡುವುದಿಲ್ಲ. ಕಳೆದ 10 ವರ್ಷಗಳ ಅವಧಿಯಲ್ಲಿ ಮಂಗಳೂರು ಕಮಿಷನರೇಟ್​ನಲ್ಲಿ 1,400ಕ್ಕೂ ಅಧಿಕ ಮಂದಿಯ ನೇಮಕಾತಿಯಾಗಿದೆ. ಇದರಲ್ಲಿ ಕೇವಲ 68 ಮಂದಿ ಮಾತ್ರ ದ‌ಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದಾರೆ‌.‌ ಈ ಭಾಗದ ಜನರು ಇನ್ನಷ್ಟು ಪ್ರಮಾಣದಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಬೇಕೆಂಬ ಕಾರಣಕ್ಕಾಗಿ ಏಕಕಾಲದಲ್ಲಿ 113 ಪೇದೆಗಳಿಗೆ ಮುಂಬಡ್ತಿ ನೀಡಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್​. ಶಶಿಕುಮಾರ್ ತಿಳಿಸಿದರು.

ABOUT THE AUTHOR

...view details