ಕರ್ನಾಟಕ

karnataka

ETV Bharat / city

ಸುಳ್ಯ : ಮಗನ ಎದೆಗೆ ಚೂರಿ ಇರಿದ ತಂದೆ! - man stabbed on son with knife at sulya

ಜಯಪ್ರಕಾಶ್‌ನ ಎದೆಗೆ ತಂದೆ ಐತ್ತಪ್ಪ ನಾಯ್ಕ್‌ರವರು ಚಾಕುವಿನಿಂದ ಇರಿದಿದ್ದಾರೆ. ಗಂಭೀರವಾಗಿ ಗಾಯಗೊಂಡು ವಿಪರೀತವಾಗಿ ರಕ್ತಸ್ರಾವಕ್ಕೊಳಗಾದ ಪುತ್ರ ಜಯಪ್ರಕಾಶನನ್ನು ಸಂಬಂಧಿ ರವಿ (ಆಟೋ ಚಾಲಕ) ಎಂಬುವರು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದರು‌..

man stabbed on son with knife at sulya
ಸುಳ್ಳದಲ್ಲಿ ಮಗನ ಎದೆಗೆ ತಂದೆಯಿಂದ ಚೂರಿ ಇರಿತ

By

Published : Jan 25, 2022, 11:51 AM IST

ಸುಳ್ಯ(ದಕ್ಷಿಣ ಕನ್ನಡ) :ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಗುಂಡ್ಯ ಎಂಬಲ್ಲಿ ತಂದೆ ಮತ್ತು ಮಗನ ಮಧ್ಯೆ ಹೊಡೆದಾಟ ನಡೆದು ಮಗನ ಎದೆಯ ಭಾಗಕ್ಕೆ ತಂದೆಯೇ ಚೂರಿಯಿಂದ ಇರಿದ್ದಾರೆ.

ಹಲ್ಲೆಗೊಳಗಾದ ಯುವಕನನ್ನು ಜಯಪ್ರಕಾಶ್ ಎಂದು ಗುರುತಿಸಲಾಗಿದೆ. ಈತನನ್ನು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡ್ಯ ನಿವಾಸಿ ಐತಪ್ಪ ನಾಯ್ಕ್ ಮತ್ತು ಆತನ ಮಗ ಜಯಪ್ರಕಾಶ್ ನಡುವೆ ಮಾತಿನ ಚಕಮಕಿಯಾಗಿ ಹೊಡೆದಾಟ ನಡೆದಿದೆ.

ಜಯಪ್ರಕಾಶ್‌ನ ಎದೆಗೆ ತಂದೆ ಐತ್ತಪ್ಪ ನಾಯ್ಕ್‌ರವರು ಚಾಕುವಿನಿಂದ ಇರಿದಿದ್ದಾರೆ. ಗಂಭೀರವಾಗಿ ಗಾಯಗೊಂಡು ವಿಪರೀತವಾಗಿ ರಕ್ತಸ್ರಾವಕ್ಕೊಳಗಾದ ಪುತ್ರ ಜಯಪ್ರಕಾಶನನ್ನು ಸಂಬಂಧಿ ರವಿ (ಆಟೋ ಚಾಲಕ) ಎಂಬುವರು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದರು‌.

ಇದನ್ನೂ ಓದಿ:ಜಮೀನು ವಿವಾದ: ಅಂತ್ಯಕ್ರಿಯೆ ವೇಳೆ ಗೊಂದಲ, ಸಮಸ್ಯೆ ಪರಿಹರಿಸಿದ ಪೊಲೀಸರು

ರಕ್ತಸ್ರಾವ ಹೆಚ್ಚಾದ ಹಿನ್ನೆಲೆ ಇಲ್ಲಿನ ವೈದ್ಯರು ಈತನಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗಲು ತಿಳಿಸಿದ್ದಾರೆ. ಸದ್ಯ ಈತನನ್ನು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. ಸ್ಥಳೀಯರ ಪ್ರಕಾರ, ಇಬ್ಬರು ಮದ್ಯ ಸೇವನೆಯ ಚಟ ಹೊಂದಿದ್ದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details