ಮಂಗಳೂರು: ಎಂಆರ್ಪಿಎಲ್ ಸಂಸ್ಥೆಯ ಗುತ್ತಿಗೆಯಡಿ ಕಚ್ಚಾತೈಲ ಹಡಗಿನ ಪೈಪ್ ಲೈನ್ ನಿರ್ವಹಣೆ ಮಾಡುತ್ತಿದ್ದ ಮತ್ತೊಂದು ದೋಣಿಯು ನಿನ್ನೆ ದುರಂತಕ್ಕೀಡಾಗಿ 9 ಜನರು ಸಂಕಷ್ಟಕ್ಕೀಡಾಗಿದ್ದಾರೆ. ಇದೀಗ ಆ ದೋಣಿಯಲ್ಲಿದ್ದ ಓರ್ವ ಸಹಾಯಕ್ಕಾಗಿ ಮೊರೆಯಿಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಸಮುದ್ರ ಮಧ್ಯೆ ಅಪಾಯಕ್ಕೀಡಾದ ಬೋಟ್: ಸಹಾಯಕ್ಕಾಗಿ ವಿಡಿಯೋ ಮೂಲಕ ಮನವಿ - ಮಂಗಳೂರು ಹಡಗು ದುರಂತ
'ಚಂಡಮಾರುತಕ್ಕೆ ಸಿಲುಕಿಹಾಕಿಕೊಂಡಿದ್ದೇವೆ.. ರಕ್ಷಣೆ ಮಾಡಿ' ಎಂದು ಕಾರ್ಮಿಕನೋರ್ವ ಮನವಿ ಮಾಡಿ ವಿಡಿಯೋ ಹರಿ ಬಿಟ್ಟಿದ್ದಾನೆ. ಅಲೆಗಳ ಅಬ್ಬರದಿಂದಾಗಿ ಸಮುದ್ರದಲ್ಲಿ ಸಿಲುಕಿರುವ ಬೋಟ್ ಬಳಿ ಹೋಗಲು ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ಸಮುದ್ರ ಮಧ್ಯೆ ಅಪಾಯಕ್ಕೀಡಾದ ಬೋಟ್
'ಚಂಡಮಾರುತದಿಂದಾಗಿ ಸಿಲುಕಿಹಾಕಿಕೊಂಡಿದ್ದೇವೆ.. ರಕ್ಷಣೆ ಮಾಡಿ' ಎಂದು ಕಾರ್ಮಿಕನೋರ್ವ ಮನವಿ ಮಾಡಿ ವಿಡಿಯೋ ಹರಿ ಬಿಟ್ಟಿದ್ದಾನೆ. ಅಲೆಗಳ ಅಬ್ಬರದಿಂದಾಗಿ ಸಮುದ್ರದಲ್ಲಿ ಸಿಲುಕಿರುವ ಈ ಬೋಟ್ ಬಳಿ ಹೋಗಲು ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ದುರಂತಕ್ಕೀಡಾಗಿರುವ ಬೋಟ್ ಪಡುಬಿದ್ರೆ ಬಳಿಯ ಸಮುದ್ರದಲ್ಲಿ ಮಂಗಳೂರಿನಿಂದ 15 ನಾಟಿಕಲ್ ದೂರದಲ್ಲಿ ನಿಂತಿದೆ. ದೋಣಿಯಲ್ಲಿರುವ ಒಂಬತ್ತು ಮಂದಿ ಕಾರ್ಮಿಕರು ಸುರಕ್ಷಿತರಾಗಿದ್ದಾರೆ ಎನ್ನಲಾಗುತ್ತಿದೆ.
Last Updated : May 16, 2021, 6:16 PM IST