ಕರ್ನಾಟಕ

karnataka

ETV Bharat / city

ಲಿಪ್​ಸ್ಟಿಕ್ ಪೆನ್ಸಿಲ್​ ಒಳಗೆ ಚಿನ್ನದ ಪೌಡರ್... ದುಬೈನಿಂದ ಬಂದಾತ ಮಂಗಳೂರಲ್ಲಿ ಸಿಕ್ಕಿಬಿದ್ದ - ಲಿಪ್​ಸ್ಟಿಕ್ ಪೆನ್ಸಿಲ್ ಒಳಗೆ ಚಿನ್ನದ ಪೌಡರ್ ಸಾಗಣೆ

ಚಿನ್ನವನ್ನು ಪೌಡರ್ ರೂಪದಲ್ಲಿ ಲಿಪ್ ಸ್ಟಿಕ್ ಪೆನ್ಸಿಲ್​ ಒಳಗಡೆ ಮರೆ ಮಾಡಿ ದುಬೈನಿಂದ ಮಂಗಳೂರಿಗೆ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಲಿಪ್​ಸ್ಟಿಕ್ ಪೆನ್ಸಿಲ್​ ಒಳಗೆ ಚಿನ್ನದ ಪೌಡರ್
ಲಿಪ್​ಸ್ಟಿಕ್ ಪೆನ್ಸಿಲ್​ ಒಳಗೆ ಚಿನ್ನದ ಪೌಡರ್

By

Published : Feb 7, 2022, 8:16 AM IST

ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಕಸ್ಟಮ್ಸ್ ಅಧಿಕಾರಿಗಳು 6.27 ಲಕ್ಷ ರೂ. ಮೌಲ್ಯದ ಅಕ್ರಮ ಸಾಗಾಟದ ಚಿನ್ನವನ್ನು ಪತ್ತೆ ಮಾಡಿದ್ದಾರೆ.

ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಆಗ ಈತ ಚಿನ್ನವನ್ನು ಪೌಡರ್ ರೂಪದಲ್ಲಿ ಲಿಪ್ ಸ್ಟಿಕ್ ಪೆನ್ಸಿಲ್ ಒಳಗಡೆ ಮರೆ ಮಾಡಿ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ತಕ್ಷಣ ಆತನನ್ನು ಮತ್ತು ಆತನ ಬಳಿ ಇದ್ದ 24 ಕ್ಯಾರೆಟ್​​ನ 127 ಗ್ರಾಂ ತೂಕದ 6,27,380 ರೂ. ಮೌಲ್ಯದ ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ABOUT THE AUTHOR

...view details