ಕರ್ನಾಟಕ

karnataka

ETV Bharat / city

ಮಳಲಿ ದೇಗುಲ ಶೈಲಿ ಪತ್ತೆ ವಿಚಾರ: ನಾಳೆ ತಾಂಬೂಲ ಪ್ರಶ್ನೆ, ಕಾನೂನು ಅಂಶದ ಮನವರಿಕೆ ಮಾಡಿದ ಜಿಲ್ಲಾಡಳಿತ - ಮಳಲಿ ಮಸೀದಿ ನವೀಕರಣ

ಮಳಲಿ ಮಸೀದಿಯ ನವೀಕರಣ ಕಾಮಗಾರಿ ವೇಳೆ ದೇಗುಲ ಶೈಲಿ ಪತ್ತೆಯಾದ ಹಿನ್ನೆಲೆಯಲ್ಲಿ ಅಷ್ಟಮಂಗಲ ಇಡಲು ನಿರ್ಧರಿಸಿದ್ದು, ಅದರ ಪೂರ್ವಭಾವಿಯಾಗಿ ನಾಳೆ ಮಳಲಿಯ ರಾಮಾಂಜನೇಯ ಭಜನಾ ಮಂದಿರದಲ್ಲಿ ತಾಂಬೂಲ ಪ್ರಶ್ನೆ ಇಡಲಾಗುವುದು.

malali-temple-style-detection-issue
ಮಳಲಿ ದೇಗುಲ ಶೈಲಿ ಪತ್ತೆ ವಿಚಾರ: ನಾಳೆ ತಾಂಬೂಲ ಪ್ರಶ್ನೆ

By

Published : May 24, 2022, 3:45 PM IST

ಮಂಗಳೂರು: ಮಂಗಳೂರಿನ ಹೊರವಲಯದ ಗಂಜಿಮಠದ ಮಳಲಿ ಮಸೀದಿಯ ನವೀಕರಣ ಕಾಮಗಾರಿ ವೇಳೆ ದೇಗುಲ ಶೈಲಿ ಪತ್ತೆಯಾದ ಹಿನ್ನೆಲೆಯಲ್ಲಿ ಹಿಂದೂಗಳ ಧಾರ್ಮಿಕ ನಂಬಿಕೆಯಾಗಿರುವ ಜ್ಯೋತಿಷ್ಯದ ಉನ್ನತ ಭಾಗವಾದ ಅಷ್ಟಮಂಗಲದ ಪೂರ್ವಭಾವಿಯಾಗಿ ನಾಳೆ ತಾಂಬೂಲ ಪ್ರಶ್ನೆ ಆಯೋಜಿಸಲು ನಿರ್ಧರಿಸಲಾಗಿದೆ.

ಮಳಲಿ ಮಸೀದಿಯಲ್ಲಿ ದೇಗುಲದ ಶೈಲಿ ಪತ್ತೆ ವಿಚಾರ ನ್ಯಾಯಾಲಯದಲ್ಲಿ ಇದ್ದು, ಇದರ ಮಧ್ಯೆ ವಿಹೆಚ್​ಪಿ ಮತ್ತು ಬಜರಂಗದಳ ಇದನ್ನು ಹೋರಾಟವಾಗಿ ತೆಗೆದುಕೊಳ್ಳಲು ನಿರ್ಧರಿಸಿದೆ. ಜ್ಯೋತಿಷ್ಯದಲ್ಲಿ ಅತೀ ಉನ್ನತ ಸ್ಥಾನದಲ್ಲಿರುವ ಅಷ್ಟಮಂಗಲ ಇಡಲು ನಿರ್ಧರಿಸಲಾಗಿದ್ದು, ಇದರ ಪೂರ್ವಭಾವಿಯಾಗಿ ನಾಳೆ ಬೆಳಗ್ಗೆ ತಾಂಬೂಲ ಪ್ರಶ್ನೆಯನ್ನಿಡಲಿದೆ‌.

ಮಳಲಿ ದೇಗುಲ ಶೈಲಿ ಪತ್ತೆ ಹಿನ್ನೆಲೆ ತಾಂಬೂಲು ಪ್ರಶ್ನೆ ಕುರಿತು ಮಾಹಿತಿ ನೀಡಿದ ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.

ನಿನ್ನೆ ಕೇರಳದ ಮೂವರು ತಂತ್ರಿಗಳು ಸ್ಥಳ ಪರಿಶೀಲನೆ ಮಾಡಿ, ನಾಳೆ ತಾಂಬೂಲ ಪ್ರಶ್ನಾ ಚಿಂತನೆಯನ್ನು ಮಳಲಿಯ ರಾಮಾಂಜನೇಯ ಭಜನಾ ಮಂದಿರದಲ್ಲಿ ಇರಿಸಲು ನಿರ್ಧರಿಸಿದ್ದಾರೆ. ಸ್ಥಳದಲ್ಲಿ ಇರುವ ದೈವಿಕ ಶಕ್ತಿ ಯಾವುದು, ಅಷ್ಟಮಂಗಲ ಎಲ್ಲಿ ಮತ್ತು ಯಾವಾಗ ಮಾಡುವುದು ಎಂಬುದನ್ನು ತಿಳಿದುಕೊಳ್ಳಲು ಈ ತಾಂಬೂಲ ಪ್ರಶ್ನೆಯನ್ನಿಡಲಾಗುತ್ತಿದೆ.

ಇದರ ಮಧ್ಯೆ ಇಂದು ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ‌. ಈ ಸಭೆಯಲ್ಲಿ ಪೊಲೀಸ್ ಇಲಾಖೆ, ವಿವಿಧ ಇಲಾಖೆ ಅಧಿಕಾರಿಗಳು, ‌ಮಳಲಿಯ ಮಸೀದಿ ಆಡಳಿತ ಮಂಡಳಿಯವರು ಭಾಗಿಯಾಗಿದ್ದರು. ಈ ಸಭೆಯಲ್ಲಿ ಮಸೀದಿ ಆಡಳಿತ ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದೆ. ಇನ್ನು ತಾಂಬೂಲ ಪ್ರಶ್ನಾ ಚಿಂತನೆ ನಡೆಸಲುದ್ದೇಶಿಸಿದ ಸಂಘಟನೆಗಳಿಗೆ ಕಾನೂನು ಅಂಶಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ಇದನ್ನೂ ಓದಿ:ಮಳಲಿ ಮಸೀದಿ ನವೀಕರಣ ವೇಳೆ ದೇವಾಲಯ ಶೈಲಿ ಪತ್ತೆ: ಮೇ 25ಕ್ಕೆ ತಾಂಬೂಲ ಪ್ರಶ್ನೆ

ABOUT THE AUTHOR

...view details