ಕರ್ನಾಟಕ

karnataka

By

Published : May 26, 2022, 5:13 PM IST

ETV Bharat / city

ಮಳಲಿ ಮಸೀದಿ ವಿವಾದ - ತಾಂಬೂಲ ಪ್ರಶ್ನೆಯಲ್ಲಿ ಕಂಡುಬಂದ ಮಠ ನಮ್ದೇ ಆಗಿರುವ ಸಾಧ್ಯತೆ; ಜಂಗಮ ಮಠ ಪ್ರತಿಪಾದನೆ

ಮಳಲಿಯಲ್ಲಿ ಹಿಂದಿನ ಕಾಲದಲ್ಲಿ ಜಂಗಮ ಮಠದ ಶಾಖೆ ಇತ್ತು ಎನ್ನುವುದು ದಾಖಲೆಗಳಲ್ಲಿದೆ. ನೀಲಕಂಠೇಶ್ವರ ಚರಿತ್ರ ಪುಸ್ತಕದಲ್ಲಿಯೂ ಮಳಲಿಯಲ್ಲಿ ಜಂಗಮ ಮಠ ಇತ್ತು ಎಂಬುದರ ಉಲ್ಲೇಖ ಇದೆ ಎಂದು ಗುರುಪುರ ಜಂಗಮ ಮಠದ ಮಠಾಧೀಶ ಶ್ರೀ ರುದ್ರಮುನಿ ಮಹಾಸ್ವಾಮೀಜಿ.

Jangama Matha
ಗುರುಪುರದಲ್ಲಿರುವ ಜಂಗಮ ಮಠ

ಮಂಗಳೂರು: ಮಳಲಿ ಮಸೀದಿಯ ನವೀಕರಣದ ವೇಳೆ ದೇಗುಲ ಶೈಲಿ ಪತ್ತೆಯಾದ ಬಳಿಕ ಹಿಂದೂ ಸಂಘಟನೆಗಳು ನಡೆಸಿದ ತಾಂಬೂಲ ಪ್ರಶ್ನೆಯಲ್ಲಿ ಕಂಡುಬಂದ ಗುರುಮಠ ನಮ್ಮದೇ ಆಗಿರುವ ಸಾಧ್ಯತೆ ಇದೆ ಎಂದು ಮಂಗಳೂರಿನ ಗುರುಪುರದಲ್ಲಿರುವ ಜಂಗಮ ಮಠಾಧಿಪತಿ ಶ್ರೀ ರುದ್ರಮುನಿ ಮಹಾಸ್ವಾಮೀಜಿ ತಿಳಿಸಿದ್ದಾರೆ.

ತಾಂಬೂಲ ಪ್ರಶ್ನೆಯಲ್ಲಿ ಕಂಡು ಬಂದಿರುವ ಗುರು ಮಠ ಎಂಬುದು ನಮ್ಮದೇ ಆಗಿರುವ ಸಾಧ್ಯತೆ ಇದೆ. ಮಳಲಿಯಲ್ಲಿ ಹಿಂದಿನ ಕಾಲದಲ್ಲಿ ಜಂಗಮ ಮಠದ ಶಾಖೆ ಇತ್ತು ಎನ್ನುವವರ ದಾಖಲೆಗಳಲ್ಲಿದೆ. ನೀಲಕಂಠೇಶ್ವರ ಚರಿತ್ರ ಪುಸ್ತಕದಲ್ಲಿಯೂ ಮಳಲಿಯಲ್ಲಿ ಜಂಗಮ ಮಠ ಇತ್ತು ಎಂಬುದಾಗಿ ಉಲ್ಲೇಖ ಇದೆ. ಹಿಂದಿನ ಕಾಲದಲ್ಲಿ ಮಳಲಿಯು ಜಂಗಮ ಮಠದ ಕೈಯಲ್ಲಿತ್ತು. ಅಲ್ಲಿಂದ 1973ರ ವರೆಗೆ ಕಟ್ಟೆಮಾರ್ ಮನೆತನದಿಂದ ಗೇಣಿ ತೆರಿಗೆ ಮಠಕ್ಕೆ ಬರುತ್ತಿತ್ತು. ವೀರಶೈವರಾದ ನಾವು ಶಿವನನ್ನು ಆರಾಧಿಸುತ್ತಿದ್ದು, ತಾಂಬೂಲ ಪ್ರಶ್ನೆಯಲ್ಲಿಯೂ ಶಿವನ ಆರಾಧನೆ ಬಗ್ಗೆಯು ಉಲ್ಲೇಖವಿದೆ ಎಂದರು.

ಗುರುಪುರ ಜಂಗಮ ಮಠದಿಂದ ಗುರುಪುರರದಲ್ಲಿ ಮಸೀದಿಯೊಂದರ ನಿರ್ಮಾಣಕ್ಕೆ ಭೂಮಿಯನ್ನು ಉಚಿತವಾಗಿ ನೀಡಲಾಗಿತ್ತು. ಇದೀಗ ಇದೇ ಮಠದ ವ್ಯಾಪ್ತಿಯಲ್ಲಿರುವ ಪ್ರದೇಶವಾಗಿದ್ದು, ಮಸೀದಿಯಾಗಿರುವ ಮಠದ ಜಾಗವನ್ನು ನಮಗೆ ಬಿಟ್ಟುಕೊಡಿ ಎಂದು ವಿನಂತಿಸಿದ್ದಾರೆ.

ಇದನ್ನೂ ಓದಿ:ಮಳಲಿ ಮಸೀದಿಯಲ್ಲಿ ಗುರುಮಠ, ಶಿವ, ದೇವಿ ಸಾನಿಧ್ಯ ಗೋಚರ; ಅಷ್ಟಮಂಗಲ ನಡೆಸಲು ಸೂಚನೆ

ABOUT THE AUTHOR

...view details