ಬಂಟ್ವಾಳ :ವಲಸೆ ಕಾರ್ಮಿಕರನ್ನು ಉಳಿಸಲು ಪ್ರತಿ ಪಂಚಾಯತ್‌ನಲ್ಲೂ ಪಾಲನಾ ಕೇಂದ್ರವನ್ನು ತೆರೆಯಬೇಕು. ಬಡವರಿಗೆ ದಿನಬಳಕೆಯ ಪ್ಯಾಕೇಜ್ ಕೊಟ್ಟು ಅವರನ್ನ ರಕ್ಷಿಸಬೇಕು ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಒತ್ತಾಯಿಸಿದ್ದಾರೆ.
ಕೊರೊನಾ ವೈರಸ್ ನಿಯಂತ್ರಣ ಉದ್ದೇಶದಿಂದ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ ಇದು ಕಠಿಣವಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.
ಆದ್ರೆ, ಈ ಕಠಿಣ ಲಾಕ್ಡೌನ್ನಿಂದ ಬಡವರು ಸಂಕಷ್ಟಕ್ಕೊಳಗಾಗಲಿದ್ದಾರೆ. ನಿತ್ಯದ ದುಡಿಮೆ ಇಲ್ಲದ ಕಾರಣ ತೊಂದರೆಗೊಳಗಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ವಲಸೆ ಕಾರ್ಮಿಕರನ್ನು ಉಳಿಸಲು ಪಾಲನಾ ಕೇಂದ್ರ ಮಾಡಿ.. ಮಲೆನಾಡು ಪ್ರದೇಶಗಳಲ್ಲಿ ಮನೆಗಳು ದೂರ ಇವೆ. ಜನರಿಗೆ ಓಡಾಟ ಮಾಡಲು ಅವಕಾಶ ಮಾಡಲಾಗಿದೆ. ರೇಷನ್ ಪಡೆದುಕೊಳ್ಳಲು ಬಡವರಿಗೆ ಕಷ್ಟವಾಗುತ್ತಿದೆ.
ದಿನಕೂಲಿ ಕಾರ್ಮಿಕರು, ಬಡವರು, ನಿರ್ಗತಿಕರು, ಆಟೋ ಚಾಲಕರಿಗೆ ದಿನಬಳಕೆ ವಸ್ತುಗಳನ್ನು ಪಡೆಯಲು ಕಷ್ಟವಾಗುತ್ತಿದೆ. ಆದ್ದರಿಂದ, ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಮನವಿ ಮಾಡುತ್ತಿದ್ದೇನೆ ಎಂದರು.
ಲಾಕ್‌ಡೌನ್ ಘೋಷಣೆ ಮಾಡಿ ಪಾಲನೆ ಮಾಡಿ ಎಂದು ಹೇಳುವುದು ಸುಲಭ. ಆದ್ರೆ, ಅದಕ್ಕೆ ತಕ್ಕಂತೆ ಬಡವರಿಗೆ ಅನುಕೂಲವಾಗುವ ಹಾಗೆ ದಿನಬಳಕೆಗೆ ಸಾಮಗ್ರಿ ಕಿಟ್ ಒದಗಿಸಿ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.