ಮಂಗಳೂರು: ಬೆಂಗಳೂರು- ಕಾರವಾರ ಮಾರ್ಗದ ನಡುವೆ ಸಂಚರಿಸುವ ರೈಲು ಹಳಿಯಲ್ಲಿ ಬಿರುಕು ಬಿಟ್ಟಿದ್ದು, ರೈಲು ಚಾಲಕನ ಸಮಯ ಪ್ರಜ್ಞೆಯಿಂದಾಗಿ ಭಾರೀ ದುರಂತವೊಂದು ತಪ್ಪಿದೆ.
ಸುಬ್ರಹ್ಮಣ್ಯ ಸಮೀಪ ಲೋಕೋ ಪೈಲಟ್ ಸಮಯ ಪ್ರಜ್ಞೆ, ತಪ್ಪಿದ ರೈಲು ಅವಘಡ - ಬಿರುಕು ಬಿಟ್ಟ ಹಳಿ
ರೈಲು ಚಾಲಕನ ಸಮಯ ಪ್ರಜ್ಞೆಯಿಂದಾಗಿ ಸುಬ್ರಹ್ಮಣ್ಯ ಸಮೀಪ ಸಂಭವಿಸುತ್ತಿದ್ದ ದೊಡ್ಡ ದುರಂತ ತಪ್ಪಿದೆ.
ಸುಬ್ರಹ್ಮಣ್ಯ ರೋಡ್ (ನೆಟ್ಟಣ) ರೈಲ್ವೆ ನಿಲ್ದಾಣದಿಂದ ಮುಂದಕ್ಕೆ ಎಡಮಂಗಲ ರೈಲ್ವೆ ನಿಲ್ದಾಣದಕ್ಕೆ ತಲುಪುವ ವೇಳೆಯಲ್ಲಿ, ರೈಲ್ವೆ ಹಳಿಯಲ್ಲಿ ಬಿರುಕು ಬಿಟ್ಟಿರುವುದು ಗೋಚರಿಸಿದೆ. ರೈಲಿನ ಒಂದು ಬೋಗಿಯು ಈ ಬಿರುಕಿನ ಮೇಲೆ ಚಲಿಸಿದಾಗ ಲೋಕೋ ಪೈಲಟ್ ಗಮನಕ್ಕೆ ಬಂದಿದೆ. ತಕ್ಷಣವೇ ರೈಲನ್ನು ನಿಯಂತ್ರಿಸಿ, ನಿಲುಗಡೆ ಮಾಡಿದ್ದಾರೆ. ಘಟನೆಯನ್ನು ರೈಲ್ವೆ ಇಲಾಖೆಯ ಗಮನಕ್ಕೆ ತಂದಿದ್ದಾರೆ.
ತುರ್ತು ಕಾರ್ಯಾಚರಣೆ ನಡೆಸಿ ಹಳಿ ದುರಸ್ತಿ ಮಾಡಲಾಗಿದ್ದು, ಬಳಿಕ ರೈಲು ಸಂಚರಿಸಲು ಅವಕಾಶ ನೀಡಲಾಯಿತು. ಬಿರುಕು ಬಿಟ್ಟ ಹಳಿಯ ಮೇಲೆ ರೈಲು ಸಂಚರಿದ್ದರೆ ಭಾರೀ ಅವಘಡ ಸಂಭವಿಸಿ ಪ್ರಾಣ ಹಾನಿ ಉಂಟಾಗುವ ಸಾಧ್ಯತೆ ಇತ್ತು. ಹೀಗಾಗಿ ಲೋಕೋ ಪೈಲಟ್ ಸಮಯ ಪ್ರಜ್ಞೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.