ಕರ್ನಾಟಕ

karnataka

ETV Bharat / city

ಮಸೀದಿಗಳ ಬಗ್ಗೆ ತಪ್ಪು ಕಲ್ಪನೆ ಬೇಡ: ಮಹಮ್ಮದ್ ಕುಂಞಿ

ಸಮಾಜದಲ್ಲಿ ಮಸೀದಿಗಳ ಬಗ್ಗೆ ಇರುವ ಬಗ್ಗೆ ತಪ್ಪು ಪರಿಕಲ್ಪನೆ ಬೇಡವೆಂದು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹಮ್ಮದ್ ಕುಂಞಿ ಹೇಳಿದರು.

Mahmoud Kunhi
ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹಮ್ಮದ್ ಕುಂಞಿ

By

Published : Dec 16, 2019, 10:41 PM IST

ಮಂಗಳೂರು:ಸಮಾಜದಲ್ಲಿ ಮಸೀದಿಗಳ ಬಗ್ಗೆ ಇರುವ ಬಗ್ಗೆ ತಪ್ಪು ಪರಿಕಲ್ಪನೆ ಬೇಡವೆಂದು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹಮ್ಮದ್ ಕುಂಞಿ ಹೇಳಿದರು.

ನಗರದ ಪ್ರೆಸ್​​​ಕ್ಲಬ್​​ನಲ್ಲಿ‌ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಸೀದಿಗೆ ಬರುವಾಗ ಯಾವುದೇ ಸಂಹಿತೆಯೂ ಇಲ್ಲ. ಶುಚಿಯಾಗಿದ್ದರೆ ಸಾಕು, ಮಹಿಳೆಯರನ್ನು ಆಹ್ವಾನಿಸುತ್ತಿದ್ದೇವೆ. ಮಸೀದಿ ಕುರಿತು ಇರುವ ಸಂಶಯಗಳ ಬಗ್ಗೆ ಮುಕ್ತವಾಗಿ ಚರ್ಚಿಸಲು ಅದರಲ್ಲೇ ಅವಕಾಶವಿದೆ. ಈ ವಾತಾವರಣವನ್ನು ಮತ್ತಷ್ಟು ಹೆಚ್ಚು ಮಾಡುತ್ತೇವೆ. ಪೂರ್ಣವಾಗಿ ಈ ಸಂಶಯ ಹೋಗಲಾಡಿಸುತ್ತೇವೆ ಎಂಬ ನಂಬಿಕೆ ಇಲ್ಲ. ಆದರೂ ಕಡಿಮೆಗೊಳಿಸಲು ಪ್ರಯತ್ನಿಸುತ್ತೇವೆ ಎಂದರು.

ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹಮ್ಮದ್ ಕುಂಞಿ

ಎಲ್ಲಾ ಧರ್ಮದ ದಾರ್ಶನಿಕರು, ಪ್ರವಾದಿಗಳು, ಸಾಧು ಸಂತರಾಗಿರುವುದು ಮನುಷ್ಯರನ್ನು ಸುಧಾರಣೆಗೊಳಿಸಲು. ಮನುಷ್ಯ ಹೇಗೆ ಬದುಕಬೇಕೆಂಬುದನ್ನು ತಿಳಿಸಿಕೊಡಲು. ದೇವರನ್ನು ರಕ್ಷಿಸಲು ಅಲ್ಲ. ಇಷ್ಟಕ್ಕೂ ದೇವರನ್ನು ರಕ್ಷಿಸುವ ಅಗತ್ಯವೂ ಇಲ್ಲ. ಪ್ರವಾದಿ ಮಹಮ್ಮದರು ದೇವರೊಂದಿಗೆ ನಿಮಗಿರುವ ಸಂಬಂಧ ಎಂತಹದು. ಓರ್ವ ದೇವನ ಮೇಲಿನ ನಂಬಿಕೆ ಮನುಷ್ಯನ ಹೃದಯವನ್ನು ವಿಶಾಲವಾಗಿರಿಸುತ್ತದೆ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ. ಏಕೆಂದರೆ ನನ್ನನ್ನ ಸೃಷ್ಟಿಸಿದ ದೇವರೇ ಇತರ ಧರ್ಮಿಯರನ್ನು ಸೃಷ್ಟಿಸಿದ್ದಾನೆ. ಇದು ಮನುಷ್ಯರ ನಡುವೆ ಸಹೋದರತ್ವ ಭಾವನೆ ಬೆಳೆಸುತ್ತದೆ ಎಂದು ತಿಳಿಸಿದರು.

ಪ್ರವಾದಿ ಮಹಮ್ಮದರು ಒಂದು ಜಾತಿ, ಧರ್ಮಕ್ಕೆ ಸೀಮಿತವಲ್ಲ. ಜಗತ್ತಿನಲ್ಲಿ ಯಾರೆಲ್ಲ ಮಹಾಪುರುಷರಿದ್ದಾರೋ ಅವರೆಲ್ಲ ದೇವರಾಗಿದ್ದಾರೆ. ಆದರೆ, ಪ್ರವಾದಿ ಮುಹಮ್ಮದರನ್ನು ಇಂದಿಗೂ ದೇವರನ್ನಾಗಿಸಲಿಲ್ಲ. ಅವರನ್ನು ಓರ್ವ ಮುಸ್ಲಿಂ ಆರಾಧಿಸಿದರೆ ಆತ ಮುಸ್ಲಿಮನಾಗಿ ಉಳಿಯುವುದೂ ಇಲ್ಲ. ಅವರ ಹೆಸರಲ್ಲಿ ಮೂರ್ತಿ, ಕಟ್ಟಡ, ನಗರ ಯಾವುದೂ ಇಲ್ಲ. ಅವರ ಚಿತ್ರಗಳಿಲ್ಲ. ಏಕೆಂದರೆ ಅವರು ಆರಾಧ್ಯ ಪುರುಷನಲ್ಲ. ತನ್ನನ್ನು ಪೂಜಿಸಿ ಎಂದು ಅವರು ಎಲ್ಲೂ ಹೇಳಿಲ್ಲ. ಅವರೊಬ್ಬ ದೇವರ ಪ್ರವಾದಿ ಎಂದುಮಹಮ್ಮದ್ ಕುಂಞಿ ವಿವರಿಸಿದರು.

ABOUT THE AUTHOR

...view details