ಮಂಗಳೂರು (ದ.ಕನ್ನಡ): ನಗರದ ಕಿನ್ನಿಗೋಳಿ ಸಮೀಪದ ತಾಳಿಪಾಡಿ ಗ್ರಾಮದ ಅಂತಲಚ್ಚಿಲ್ ನಾಗಬನದ ಗುಡ್ಡೆಯ ಬಳಿ ಆಹಾರವನ್ನರಸಿಕೊಂಡು ಬಂದಿರುವ ಚಿರತೆಯೊಂದು ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ ಬಿದ್ದಿದೆ.
ಕಿನ್ನಿಗೋಳಿ-ತಾಳಿಪಾಡಿ ಪರಿಸರದಲ್ಲಿ ಹಲವು ತಿಂಗಳಿನಿಂದ ಚಿರತೆಯು ಜನವಸತಿ ಪ್ರದೇಶಕ್ಕೆ ಬಂದು ಸಾಕು ನಾಯಿ ಹಾಗೂ ಇನ್ನಿತರ ಪ್ರಾಣಿಗಳನ್ನು ಹೊತ್ತೊಯ್ಯುತ್ತಿತ್ತು. ಚಿರತೆ ಜನವಸತಿ ಪ್ರದೇಶಕ್ಕೆ ಬರುತ್ತಿರುವುದು ಸಾರ್ವಜನಿಕರ ಭೀತಿಗೆ ಕಾರಣವಾಗಿತ್ತು. ಇಲ್ಲಿನ ಜನರು ರಾತ್ರಿ ವೇಳೆ ಸಂಚರಿಸಲು ಭಯಪಡುತ್ತಿದ್ದರು.