ಕರ್ನಾಟಕ

karnataka

ETV Bharat / city

ಮಂಗಳೂರು ಹಿಂಸಾಚಾರದಲ್ಲಿ ಮೃತಪಟ್ಟವರ ಮನೆಗೆ ಎಲ್​​ಡಿಎಫ್ ನಿಯೋಗ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ - ಮಂಗಳೂರಿಗೆ ಎಲ್​​ಡಿಎಫ್ ನಿಯೋಗ ಭೇಟಿ

ನಗರದಲ್ಲಿ ನಡೆದ ಹಿಂಸಾಚಾರದಲ್ಲಿ ಮೃತಪಟ್ಟವರ ಮನೆಗೆ ಎಲ್​ಡಿಎಫ್​ ಮುಖಂಡರು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ನೀಡಿದರು. ಜೊತೆಗೆ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

LDF_Lead_Deligation
ಮಂಗಳೂರು ಹಿಂಸಾಚಾರದಲ್ಲಿ ಮೃತಪಟ್ಟವರ ಮನೆಗೆ ಎಲ್​​ಡಿಎಫ್ ನಿಯೋಗ ಭೇಟಿ

By

Published : Dec 24, 2019, 1:17 PM IST

ಮಂಗಳೂರು: ನಗರದಲ್ಲಿ ನಡೆದ ಪೌರತ್ವ (ತಿದ್ದುಪಡಿ) ಕಾಯ್ದೆ ಪ್ರತಿಭಟನೆ ಹಿಂಸಾರೂಪ ಪಡೆದ ಹಿನ್ನೆಲೆಯಲ್ಲಿ ನಡೆದ ಗೋಲಿಬಾರ್​ನಲ್ಲಿ ಮೃತಪಟ್ಟವರ ಮನೆಗೆ ಕೇರಳದ ಎಲ್​ಡಿಎಫ್ ನಿಯೋಗದ ಮುಖಂಡರು ಭೇಟಿ ನೀಟಿ, ಕುಟುಂಬಸ್ಥರಿಗೆ ಸಾಂತ್ವನ ನೀಡಿದರು.

ಮೊದಲಿಗೆ ಗೋಲಿಬಾರ್​​ನಲ್ಲಿ ಮೃತಪಟ್ಟ ಕಂದಕ್ ನಿವಾಸಿ ಜಲೀಲ್ ಮನೆಗೆ ಭೇಟಿ ನೀಡಿದ ನಿಯೋಗ ಬಳಿಕ ಅವರು ಗುಂಡೇಟಿಗೆ ಬಲಿಯಾಗಿ ಮೃತಪಟ್ಟ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಬಳಿಕ ಕುದ್ರೋಳಿ ನಿವಾಸಿ ನೌಶೀನ್ ಮನೆಗೆ ಭೇಟಿ ನೀಡಿ ಅವರ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದರು. ನಂತರ ಆಸ್ಪತ್ರೆಗೆ ತೆರಳಿ ಹಿಂಸಾಚಾರದಲ್ಲಿ ಗಾಯಗೊಂಡವರಿಗೆ ಸಾಂತ್ವನ ತಿಳಿಸಿತು.

ಹಿಂಸಾಚಾರದಲ್ಲಿ ಮೃತಪಟ್ಟವರ ಮನೆಗೆ ಎಲ್​​ಡಿಎಫ್ ನಿಯೋಗ ಭೇಟಿ
ಸಂಸದರಾದ ಕರೀಮ್, ಕೆ.ಕೆ.ರಾಗೇಶ್, ಮಾಜಿ ಸಂಸದ ಪಿ.ಕರುಣಾಕರನ್, ಶಾಸಕರಾದ ಎಂ.ರಾಜಗೋಪಾಲನ್, ಕೆ.ಕುಂಞಿರಾಮನ್, ಮಾಜಿ ಶಾಸಕ ಸಿ.ಎಚ್.ಕುಂಞಾಂಬು, ಕೆ.ಆರ್.ಜಯಾನಂದ, ಬಾಲಕೃಷ್ಣ, ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ, ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಮತ್ತಿತರರು ನಿಯೋಗದದಲ್ಲಿ ಉಪಸ್ಥಿತರಿದ್ದರು.

ABOUT THE AUTHOR

...view details