ಮಂಗಳೂರು:ಪಾಳುಬಾವಿಗೆ ಬಿದ್ದು ಮೇಲೆ ಬರಲಾಗದೆ ಒದ್ದಾಡುತ್ತಿದ್ದ ಬೆಕ್ಕಿನ ಮರಿಯೊಂದನ್ನು ಮಹಿಳಾ ಪ್ರಾಣಿ ಪ್ರಿಯೆ ಸ್ವತಃ ಬಾವಿಗಿಳಿದು ರಕ್ಷಣೆ ಮಾಡಿರುವ ಘಟನೆ ನಗರದ ಜೆಪ್ಪುವಿನಲ್ಲಿ ನಡೆದಿದೆ.
ಜೆಪ್ಪುವಿನ ಸಂದೀಪ್ ಎಂಬವರ ಮನೆಯ ಪಕ್ಕದಲ್ಲಿದ್ದ ಪಾಳು ಬಾವಿಗೆ ಬೆಕ್ಕಿನ ಮರಿ ಬಿದ್ದಿತ್ತು. ಆದರೆ ಮೇಲೆ ಬರಲಾಗದೆ ಕಲ್ಲೊಂದನ್ನು ಆಶ್ರಯಿಸಿ ಕುಳಿತಿತ್ತು. ಈ ಬಗ್ಗೆ ಸಂದೀಪ್ ಅವರು ಪ್ರಾಣಿ ಪ್ರಿಯೆ ರಜನಿ ಶೆಟ್ಟಿಯವರಿಗೆ ಕರೆ ಮಾಡಿದ್ದಾರೆ. ತಕ್ಷಣ ಸ್ಥಳಕ್ಕೆ ದೌಢಾಯಿಸಿದ ಅವರು ಸೊಂಟಕ್ಕೆ ಹಗ್ಗ ಬಿಗಿದು ಬಾವಿಗಿಳಿದು ಬೆಕ್ಕಿನ ಮರಿ ರಕ್ಷಿಸಿದರು.