ಸುಬ್ರಹ್ಮಣ್ಯ(ದಕ್ಷಿಣ ಕನ್ನಡ):ವಿಶ್ವ ಪ್ರಸಿದ್ಧ ನಾಗಾರಾಧನೆಯ ಪುಣ್ಯ ತಾಣ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಇಂದು ರವಿವಾರ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಷಷ್ಠಿ, ಆಶ್ಲೇಷ ನಕ್ಷತ್ರ ಮತ್ತು ದೇವರು ಒಳಾಂಗಣ ಪ್ರವೇಶಿಸುವ ಪುಣ್ಯ ದಿನ ಸೇರಿದಂತೆ ರಜಾದಿನವು ಆಗಿರುವುದರಿಂದ ಕ್ಷೇತ್ರಕ್ಕೆ ಭಕ್ತರ ಜನಸಮೂಹವೇ ಹರಿದು ಬಂದಿದೆ.
ಇಂದಿನ ದಿನ ಷಷ್ಠಿ, ಆಶ್ಲೇಷ ನಕ್ಷತ್ರ ಇರುವುದರಿಂದ ಆಶ್ಲೇಷ ಪೂಜೆ ಮಾಡಿಸಲು ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೆಚ್ಚಿನ ಭಕ್ತರು ಆಗಮಿಸಿದ್ದಾರೆ. ಕುಕ್ಕೆಯ ರಾಜಗೋಪುರದಿಂದ ಕೆಎಸ್ಆರ್ಟಿಸಿ ಬಸ್ ನಿಲ್ದಾಣವರೆಗೂ ಭಕ್ತರು ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂದಿದೆ. ಶನಿವಾರ ರಾತ್ರಿಯಿಂದಲೇ ಕುಕ್ಕೆ ಕ್ಷೇತ್ರಕ್ಕೆ ಭಕ್ತರು ಆಗಮಿಸಿದ್ದಾರೆ.