ಕರ್ನಾಟಕ

karnataka

ETV Bharat / city

ಮಂಗಳೂರು: ನಾಯಿ ಜೀವ ಉಳಿಸಲು ಹೋಗಿ ಚರಂಡಿಗಿಳಿದ ಕೆಎಸ್ಆರ್​ಟಿಸಿ ಬಸ್

ಬಳ್ಳಾರಿಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಬಸ್ಸೊಂದು ರಸ್ತೆಗೆ ಅಡ್ಡ ಬಂದ ನಾಯಿಯನ್ನು ಉಳಿಸಲು ಹೋಗಿ ಚರಂಡಿಗಿಳಿದ ಘಟನೆ ಮಂಗಳೂರು ಹೊರವಲಯದ ಮುಲ್ಕಿ ರಾಷ್ಟ್ರೀಯ ಹೆದ್ದಾರಿ 66ರ ಬಪ್ಪನಾಡಿನಲ್ಲಿ ನಡೆದಿದೆ.

ksrtc-bus-landing-in-the-sewer-at-mangalore
ನಾಯಿ ಜೀವ ಉಳಿಸಲು ಹೋಗಿ ಚರಂಡಿಗಿಳಿದ ಕೆಎಸ್ಆರ್​ಟಿಸಿ ಬಸ್

By

Published : Feb 2, 2021, 7:38 PM IST

ಮಂಗಳೂರು:ರಸ್ತೆಗೆ ಅಡ್ಡ ಬಂದ ನಾಯಿ ಜೀವ ಉಳಿಸಲು ಹೋಗಿ ಕೆಎಸ್ಆರ್​ಟಿಸಿ ಬಸ್ಸೊಂದು ಚರಂಡಿಗಿಳಿದ ಘಟನೆ ಮಂಗಳೂರು ಹೊರವಲಯದ ಮುಲ್ಕಿ ರಾಷ್ಟ್ರೀಯ ಹೆದ್ದಾರಿ 66ರ ಬಪ್ಪನಾಡಿನಲ್ಲಿ ನಡೆದಿದೆ.

ನಾಯಿ ಜೀವ ಉಳಿಸಲು ಹೋಗಿ ಚರಂಡಿಗಿಳಿದ ಕೆಎಸ್ಆರ್​ಟಿಸಿ ಬಸ್

ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಬಳ್ಳಾರಿಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಬಸ್ಸಿಗೆ ಏಕಾಏಕಿಯಾಗಿ ನಾಯಿಯೊಂದು ಅಡ್ಡ ಬಂದಿದೆ. ಚಾಲಕ ನಾಯಿ ಜೀವ ಉಳಿಸಲು ಹೋಗಿ ಬಸ್​ ಎಡಕ್ಕೆ ತಿರುಗಿಸಿದ್ದಾನೆ‌. ಪರಿಣಾಮ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯಲ್ಲಿದ್ದ ಚರಂಡಿಗಿಳಿದು ವಾಲಿ ನಿಂತಿದೆ. ಅದೃಷ್ಟವಶಾತ್ ಬಸ್ ಪಲ್ಟಿಯಾಗದೇ ಬ್ಯಾಲೆನ್ಸ್ ಮಾಡಿ ನಿಂತಿದೆ. ಇದರಿಂದ ಯಾವುದೇ ಪ್ರಾಣಾಪಾಯವಿಲ್ಲದೇ ಪ್ರಯಾಣಿಕರು ಪಾರಾಗಿದ್ದಾರೆ‌.

ಓದಿ:ಗೋಮಾಂಸ ರಫ್ತು ಕೈಬಿಟ್ಟ ನಂತರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿ: ಸರ್ಕಾರಕ್ಕೆ ದೊರೆಸ್ವಾಮಿ ಪತ್ರ

ತಕ್ಷಣ ಸ್ಥಳಕ್ಕೆ ಸುರತ್ಕಲ್ ಸಂಚಾರಿ ಪೊಲೀಸರು ಆಗಮಿಸಿ, ಕ್ರೇನ್ ಮೂಲಕ ಬಸ್​​ ಮೇಲೆತ್ತಿದ್ದಾರೆ.

ABOUT THE AUTHOR

...view details