ಕರ್ನಾಟಕ

karnataka

ETV Bharat / city

ಮಂಗಳೂರಿನಲ್ಲಿ ತಾಯಿ-ಮಗನಿಗೆ ಕೊರೊನಾ... ದ.ಕ. ದಲ್ಲಿ 21ಕ್ಕೇರಿದ ಸೋಂಕಿತರ ಸಂಖ್ಯೆ - ಕೊರೊನಾ ವೈರಸ್​ ಭೀತಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೂ 21 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, 12 ಮಂದಿ ಗುಣಮುಖರಾಗಿದ್ದಾರೆ. ಇಂದು ತಾಯಿ-ಮಗನಲ್ಲಿ ಮಹಾಮಾರಿ ಕೊರೊನಾ ದೃಢಪಟ್ಟಿದೆ.

Kovid-19 confirm for mother-son in Mangalore
ಮಂಗಳೂರಿನಲ್ಲಿ ತಾಯಿ-ಮಗನಿಗೆ ಕೊರೊನಾ

By

Published : Apr 27, 2020, 1:41 PM IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ತಾಯಿ ಮತ್ತು ಮಗನಲ್ಲಿ ಕೋವಿಡ್-19 ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.

ಮಂಗಳೂರಿನ ಕುಲಶೇಖರ ಶಕ್ತಿನಗರದ 80 ವರ್ಷದ ಮಹಿಳೆ ಮತ್ತು ಅವರ ಪುತ್ರ 45 ವರ್ಷದ ವ್ಯಕ್ತಿಗೆ ಇಂದು ಕೊರೊನಾ ದೃಢಪಟ್ಟಿದೆ.

ಇತ್ತೀಚೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊರೊನಾ ಪಾಸಿಟಿವ್​ನಿಂದ ಮೃತಪಟ್ಟ ಮಹಿಳೆ ಸಂಪರ್ಕದಿಂದ ಸೋಂಕು ಬಂದಿದೆ. ಜಿಲ್ಲೆಯಲ್ಲಿ ಕೊರೊನಾ ದೃಢಪಟ್ಟ 21 ಜನರ ಪೈಕಿ 12 ಮಂದಿ ಗುಣಮುಖರಾಗಿದ್ದಾರೆ. ಇಬ್ಬರು ಸಾವನ್ನಪ್ಪಿದ್ದು, ಏಳು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details