ಮಂಗಳೂರು:ಕೊರಗಜ್ಜನ ಗುಡಿಯನ್ನು ಅಪವಿತ್ರಗೊಳಿಸಿರುವ ಘಟನೆ ಮತ್ತೊಮ್ಮೆ ಮಂಗಳೂರಿನಲ್ಲಿ ನಡೆದಿದೆ. ಮಾರ್ನಮಿಕಟ್ಟೆಯಲ್ಲಿರುವ ಸ್ವಾಮಿ ಕೊರಗಜ್ಜ ದೈವದಗುಡಿಗೆ ಅಪಮಾನ ಮಾಡಲಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ವಿಶ್ವ ಹಿಂದೂ ಪರಿಷತ್ ಮುಖಂಡರುಗಳು ಮತ್ತು ಭಕ್ತರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಆಕ್ರೋಶ ವ್ಯಕ್ತಪಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ. ಘಟನೆ ಸಂಬಂಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕೊರಗಜ್ಜ ಗುಡಿ ಅಪವಿತ್ರ: ಸಾಕ್ಷ್ಯಾಧಾರದ ಕೊರತೆಗೆ ಶಂಕಿತರನ್ನು ಬಂಧಿಸದ ಪೊಲೀಸರು
ಕೆಲವು ತಿಂಗಳುಗಳ ಹಿಂದೆ ಕೂಡ ಮಂಗಳೂರಿನ ಹಲವು ಕೊರಗಜ್ಜನ ಕಟ್ಟೆಯ ಗುಡಿಗಳನ್ನು ಅಪವಿತ್ರಗೊಳಿಸಿದ ಘಟನೆಗಳು ನಡೆದಿತ್ತು. ಎಮ್ಮೆಕೆರೆಯ ಕೊರಗಜ್ಜನ ಜಾತ್ರೆ ವೇಳೆ ಇಬ್ಬರು ಯುವಕರು ಬಂದು "ನಮ್ಮ ಗೆಳೆಯನೊಬ್ಬ ಕೊರಗಜ್ಜನ ಗುಡಿ ಅಪಚಾರ ಮಾಡಿ ರಕ್ತಕಾರಿ ಸತ್ತಿದ್ದಾನೆ. ನಮಗೂ ಈಗ ಭಯವಾಗುತ್ತಿದೆ" ಎಂದು ತಪ್ಪುಕಾಣಿಕೆ ಹಾಕಲು ಬಂದಿದ್ದರು. ಅವರನ್ನು ಪೊಲೀಸರು ವಿಚಾರಿಸಿದರೂ ಅವರೇ ಈ ದುಷ್ಕೃತ್ಯ ಎಸಗಿದ್ದು ಎಂದು ಸಾಬೀತು ಆಗಿರಲಿಲ್ಲ. ಹೀಗಾಗಿ ಅವರನ್ನು ಪೊಲೀಸರು ಬಂಧಿಸಿರಲಿಲ್ಲ.