ಕರ್ನಾಟಕ

karnataka

ETV Bharat / city

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ - Karnataka Tulu Sahitya Akademi Award Announced

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟಿಸಿದರು. 2020ನೇ ಸಾಲಿನ ಗೌರವ ಪ್ರಶಸ್ತಿಗೆ ರಾಮಚಂದರ್ ಬೈಕಂಪಾಡಿ, ತುಂಗಪ್ಪ ಬಂಗೇರ, ಆನಂದ ಪೂಜಾರಿ ಹಳೆಯಂಗಡಿ, 2019 ನೇ ಸಾಲಿನ ಗೌರವ ಪ್ರಶಸ್ತಿಗೆ ಡಾ. ಎಸ್.ಆರ್.ವಿಘ್ನರಾಜ ಧರ್ಮಸ್ಥಳ, ತಿಮ್ಮಪ್ಪ ಗುಜರನ್ ತಲಕಳ, ಗುರುವ ಕೊರಗ ಹಿರಿಯಡ್ಕ ಹಾಗೂ 2018ನೇ ಸಾಲಿನ ಗೌರವ ಪ್ರಶಸ್ತಿಗೆ ಲಲಿತಾ ಆರ್ ರೈ, ರತ್ನಾಕರ ರಾವ್ ಕಾವೂರು, ಎ.ಕೆ.ವಿಜಯ್ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.

ದಯಾನಂದ ಕತ್ತಲ್ ಸಾರ್
ದಯಾನಂದ ಕತ್ತಲ್ ಸಾರ್

By

Published : Feb 27, 2021, 9:56 AM IST

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2018, 2019, 2020ನೇ ಸಾಲಿನ ಗೌರವ ಪ್ರಶಸ್ತಿಯನ್ನು ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಅವರು ಪ್ರಕಟಿಸಿದರು.

ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಮಾಧ್ಯಮಗೋಷ್ಟಿ

ಮಂಗಳೂರಿನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮೂರು ವರ್ಷದ ಗೌರವ ಪ್ರಶಸ್ತಿ ಘೋಷಣೆಯನ್ನು ಮಾಡಿದರು. 2020ನೇ ಸಾಲಿನ ಗೌರವ ಪ್ರಶಸ್ತಿಗೆ ರಾಮಚಂದರ್ ಬೈಕಂಪಾಡಿ, ತುಂಗಪ್ಪ ಬಂಗೇರ, ಆನಂದ ಪೂಜಾರಿ ಹಳೆಯಂಗಡಿ, 2019 ನೇ ಸಾಲಿನ ಗೌರವ ಪ್ರಶಸ್ತಿಗೆ ಡಾ. ಎಸ್.ಆರ್. ವಿಘ್ನರಾಜ ಧರ್ಮಸ್ಥಳ, ತಿಮ್ಮಪ್ಪ ಗುಜರನ್ ತಲಕಳ, ಗುರುವ ಕೊರಗ ಹಿರಿಯಡ್ಕ ಹಾಗೂ 2018ನೇ ಸಾಲಿನ ಗೌರವ ಪ್ರಶಸ್ತಿಗೆ ಲಲಿತಾ ಆರ್ ರೈ, ರತ್ನಾಕರ ರಾವ್ ಕಾವೂರು, ಎ.ಕೆ.ವಿಜಯ್ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.

ಮೂರು ವರ್ಷಗಳಲ್ಲಿ ಗೌರವ ಪ್ರಶಸ್ತಿಗೆ ಆಯ್ಕೆಯಾದ 9 ಮಂದಿಗೆ ಮಾರ್ಚ್ 7 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ಮಾಧ್ಯಮಗೋಷ್ಟಿಯಲ್ಲಿ ತುಳು ಅಕಾಡೆಮಿಯ ರಿಜಿಸ್ಟ್ರಾರ್ ರಾಜೇಶ್ ಜಿ ಮತ್ತು ಸದಸ್ಯರಾದ ಲೀಲಾಕ್ಷ ಕರ್ಕೇರ, ನರೇಂದ್ರ ಕೆರೆಕಾಡು, ವಿಜಯಲಕ್ಷ್ಮಿ ಶೆಟ್ಟಿ, ರವೀಂದ್ರ ಶೆಟ್ಟಿ ಬಳಂಜ, ನಾಗೇಶ್ ಕುಲಾಲ್, ಮಲ್ಲಿಕಾ ಅಜಿತ್ ಶೆಟ್ಟಿ, ಕಡಬ ದಿನೇಶ್ ರೈ, ನಿಟ್ಟೆ ಶಶಿಧರ್ ಶೆಟ್ಟಿ, ಉಮೇಶ್ ಆಚಾರ್ಯ, ಚೇತಕ್ ಪೂಜಾರಿ, ಸಂತೋಷ್ ಪೂಜಾರಿ ಉಪಸ್ಥಿತರಿದ್ದರು..

ABOUT THE AUTHOR

...view details