ಕರ್ನಾಟಕ

karnataka

ETV Bharat / city

ಬಿ ವಿ ಕಕ್ಕಿಲ್ಲಾಯ ಜನ್ಮಶತಾಬ್ದಿ.. ಕನ್ಹಯ್ಯಕುಮಾರ್ ಮಂಗಳೂರಿಗೆ

ಸುದ್ದಿಗಾರರೊಂದಿಗೆ ಮಾತನಾಡಿದ ಸಮದರ್ಶಿ ವೇದಿಕೆಯ ಡಾ.ಬಿ.ಶ್ರೀನಿವಾಸ ಕಕ್ಕಿಲ್ಲಾಯ, ಬಿ ವಿ ಕಕ್ಕಿಲ್ಲಾಯರು ಯಾವ ಆಶಯಗಳಿಗಾಗಿ ಹೋರಾಟ ಮಾಡಿದರೋ ಆ ಆಶಯಗಳನ್ನು ಪ್ರತಿನಿಧಿಸುವ ಚಿಂತಕರು, ಹೋರಾಟಗಾರರನ್ನು ಕರೆಸಿ ಚರ್ಚೆ ನಡೆಸಲಿದ್ದೇವೆ. ಕಾರ್ಯಕ್ರಮವನ್ನು ಕಾಂಗ್ರೆಸ್​ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಮರ್ ಜಿತ್ ಕೌರ್ ಉದ್ಘಾಟಿಸಲಿದ್ದಾರೆ.

By

Published : Aug 7, 2019, 8:20 PM IST

Updated : Aug 7, 2019, 10:00 PM IST

ಸುದ್ದಿಘೋಷ್ಠಿ

ಮಂಗಳೂರು: ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣ ಚಳವಳಿಯ ನಾಯಕ, ರಾಜ್ಯಸಭಾ ಸದಸ್ಯ, ಶಾಸಕರಾಗಿದ್ದ ಬಿ ವಿ ಕಕ್ಕಿಲ್ಲಾಯ ಅವರ ಜನ್ಮಶತಾಬ್ದಿ ಪ್ರಯುಕ್ತ ಉಪನ್ಯಾಸ ಸಂವಾದ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈಗ ನಮ್ಮ ದೇಶದಲ್ಲಿ ಸಮಕಾಲೀನ ಪರಿಸ್ಥಿತಿ ಹೇಗಿದೆ. ರಾಜಕೀಯ,ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಸ್ಥಿತಿ ಹೇಗಿದೆ ಎಂಬ ಬಹಳ ಆಳವಾದ ಗಂಭೀರ ಚರ್ಚೆಯನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಸಮದರ್ಶಿ ವೇದಿಕೆಯ ಡಾ. ಬಿ ಶ್ರೀನಿವಾಸ ಕಕ್ಕಿಲ್ಲಾಯ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ ವಿ ಕಕ್ಕಿಲ್ಲಾಯರು ಯಾವ ಆಶಯಗಳಿಗಾಗಿ ಹೋರಾಟ ಮಾಡಿದರೋ ಆ ಆಶಯಗಳನ್ನು ಪ್ರತಿನಿಧಿಸುವ ಚಿಂತಕರು, ಹೋರಾಟಗಾರರನ್ನು ಕರೆಸಿ ಚರ್ಚೆ ನಡೆಸಲಿದ್ದೇವೆ. ಕಾರ್ಯಕ್ರಮವನ್ನು ಅಖಿಲ ಭಾರತ ಟ್ರೇಡ್​ ಯೂನಿಯನ್​ ಕಾಂಗ್ರೆಸ್​ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಮರ್ ಜಿತ್ ಕೌರ್ ಉದ್ಘಾಟಿಸಲಿದ್ದಾರೆ. ಆ ಬಳಿಕ‌ ಜೆಎನ್‌ಯು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಡಾ.ಕನ್ಹಯ್ಯಕುಮಾರ್ ಭಾರತದ ಯುವಜನರು ಕವಲು ದಾರಿಯಲ್ಲಿ ಎಂಬ ವಿಷಯದ ಬಗ್ಗೆ ಮಾತನಾಡಲಿದ್ದಾರೆ. ಅದಕ್ಕೆ ಅಮರ್ ಜಿತ್ ಕೌರ್ ತಮ್ಮ ಅನುಭವದ ಮೂಲಕ ಪ್ರತಿಕ್ರಿಯಿಸಲಿದ್ದಾರೆ ಎಂದು ಹೇಳಿದರು.

ಡಾ. ಶ್ರೀನಿವಾಸ್ ಬಿ ಕಕ್ಕಿಲ್ಲಾಯ ಸುದ್ದಿಗೋಷ್ಠಿ..

ಪ್ರತಿ ಚರ್ಚೆಯನ್ನು 2 ಗಂಟೆಗಳ ಕಾಲ ನಿಗದಿ ಪಡಿಸಿದ್ದೇವೆ. ಅರ್ಧಗಂಟೆ ವಿಷಯಕ್ಕೆ ಸಂಬಂಧಪಟ್ಟು ವಿದ್ವಾಂಸರು ಮಾತನಾಡಲಿದ್ದಾರೆ. ಅದಕ್ಕೆ ಮತ್ತೊಬ್ಬ ಚಿಂತಕ ಪ್ರತಿಕ್ರಿಯೆ ನೀಡಲಿದ್ದಾರೆ. ಬಳಿಕ ಅದೇ ವಿಷಯದ ಬಗ್ಗೆ 1 ಗಂಟೆಗಳ ಕಾಲ ಸಂವಾದ ಕಾರ್ಯಕ್ರಮ ಇರಲಿದೆ ಎಂದು ಶ್ರೀನಿವಾಸ ಕಕ್ಕಿಲ್ಲಾಯರು ಹೇಳಿದರು. ಅಗಸ್ಟ್ 10-11ರಂದು 2 ದಿನಗಳ ಕಾಲ ನಡೆಯುವ ಬೌದ್ಧಿಕ ವಿಚಾರ ಮಂಥನ ಕಾರ್ಯಕ್ರಮದಲ್ಲಿ ದೇಶದ ಪ್ರಖ್ಯಾತ ವಿದ್ವಾಂಸರು, ಚಿಂತಕರು ಆದ ಪ್ರೊ.ಆನಂದ ತೇಲ್ತುಂಬ್ಡೆ, ಪಾರ್ಥಸಾರಥಿ, ಡಾ.ಟಿ ಎಸ್ ವೇಣುಗೋಪಾಲ್, ಸಾತಿ ಸುಂದರೇಶ್, ನೂರ್ ಜಹೀರ್, ಮುಜಾಫರ್ ಅಸ್ಸಾದಿ, ಟಿ ಎಂ ಕೃಷ್ಣನ್, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಪತ್ರಕರ್ತ ದಿನೇಶ್ ಅಮಿನಮಟ್ಟು, ರಾಜ್ಯಸಭಾ ಸದಸ್ಯ ಬಿನೋಯ್ ವಿಶ್ವಂ, ಡಾ.ವಿಜಯ ಪೂಣಚ್ಚಾ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಬಿ ವಿ ಕಕ್ಕಿಲ್ಲಾಯರು ಈ ನಾಡು-ನುಡಿಗಾಗಿ ಕಳೆದ ಎಪ್ಪತ್ತು ವರ್ಷಗಳಿಂದ ಸಕ್ರಿಯವಾಗಿ ದುಡಿದವರು. ಮಂಗಳೂರಿನ ಅಲೋಶಿಯಸ್ ಕಾಲೇಜಿನಲ್ಲಿ ವಿದ್ಯಾರ್ಥಿ ಚಳವಳಿಗೆ ಧುಮುಕಿ ಬಳಿಕ 1940ರಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷ ಸೇರಿದರು. ಅಲ್ಲಿಂದ 2012ರಲ್ಲಿ ಕೊನೆಯುಸಿರೆಳೆವ ದಿನದ ವರೆಗೆ ಅದೇ ಪಕ್ಷದಲ್ಲಿದ್ದರು‌. ದುಡಿಯುವ ಜನರ ಹೋರಾಟದಲ್ಲಿ, ಕರ್ನಾಟಕ ಏಕೀಕರಣ, ಗೋವಾ ವಿಮೋಚನೆ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅವರ ನೆನಪಿಗಾಗಿ ಪ್ರತಿ ವರ್ಷ ಈ ದೇಶದ ಹಿರಿಯ ವಿದ್ವಾಂಸರು, ಚಿಂತಕರಿಂದ ಬಿ ವಿ ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸ ಏರ್ಪಡಿಸುತ್ತಿರುತ್ತೇವೆ. ಅದೇ ರೀತಿ ಅವರ ಜನ್ಮಶತಾಬ್ದಿ ಪ್ರಯುಕ್ತ ಶ್ರೇಷ್ಠ ವಿದ್ವಾಂಸರು, ಚಿಂತಕರಿಂದ ಉಪನ್ಯಾಸ, ಸಂವಾದ ನಡೆಯಲಿದೆ ಎಂದು ಡಾ.ಶ್ರೀನಿವಾಸ ಕಕ್ಕಿಲ್ಲಾಯ ಹೇಳಿದರು.

Last Updated : Aug 7, 2019, 10:00 PM IST

ABOUT THE AUTHOR

...view details