ದಕ್ಷಿಣ ಕನ್ನಡ:ಬಂಟ್ವಾಳ ತಾಲೂಕಿನ ಉಳಿ ಕಕ್ಯಪದವಿನಲ್ಲಿ ಶನಿವಾರ ಆರಂಭಗೊಂಡ ಸತ್ಯ ಧರ್ಮ ಹೆಸರಿನ ಜೋಡುಕರೆ ಬಯಲು ಕಂಬಳಕ್ಕೂ ಕೊರೊನಾ ನೈಟ್ ಕರ್ಫ್ಯೂ ಬಾಧಿಸಿದೆ. ಈ ಹಿನ್ನೆಲೆಯಲ್ಲಿ ರಾತ್ರಿ 9 ಗಂಟೆಗೆ ಇದ್ದ ಕಂಬಳವನ್ನು ಸ್ಥಗಿತಗೊಳಿಸಿ ಭಾನುವಾರ ಮುಂಜಾನೆ 5ರ ಬಳಿಕ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಕಂಬಳ ಸಮಿತಿ ಗೌರವಾಧ್ಯಕ್ಷ ,ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ತಿಳಿಸಿದ್ದಾರೆ.
ಸಾಮಾನ್ಯವಾಗಿ ಬೆಳಗ್ಗೆ ಆರಂಭಗೊಂಡ ಕಂಬಳ ಮರುದಿನ ಬೆಳಗ್ಗೆವರೆಗೆ ನಡೆಯುತ್ತದೆ. ಈ ಬಾರಿಯೂ ಕಂಬಳದಲ್ಲಿ ಸುಮಾರು 150ಕ್ಕೂ ಹೆಚ್ಚು ಕೋಣಗಳು ಪಾಲ್ಗೊಂಡಿದ್ದವು. ಆದರೆ ನೈಟ್ ಕರ್ಫ್ಯೂ ವಿಧಿಸಿರುವ ಕಾರಣ ಕಂಬಳವನ್ನು ಕೋವಿಡ್ ನಿಯಮಾವಳಿಗೆ ಅನುಸಾರವಾಗಿ ನಡೆಸಬೇಕಾಯಿತು.