ಬಂಟ್ವಾಳ :ಸ್ನೇಹಿತೆಯೊಂದಿಗೆ ಹೊರಗೆ ಹೋಗಿ ಬರುತ್ತೇನೆಂದು ಹೇಳಿ ನಾಪತ್ತೆಯಾಗಿದ್ದ ಯುವತಿ ತನ್ನ ಪ್ರಿಯಕರನ ಜತೆ ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾಳೆ.
ಸ್ನೇಹಿತೆಯೊಂದಿಗೆ ತೆರಳಿ ನಾಪತ್ತೆಯಾಗಿದ್ದ ವಿಟ್ಲದ ಯುವತಿ ಪ್ರಿಯಕರನೊಂದಿಗೆ ಪತ್ತೆ - ಬಂಟ್ವಾಳ ಕ್ರೈಮ್ ನ್ಯೂಸ್
ಈ ಕುರಿತು ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ನಾಪತ್ತೆ ಪ್ರಕರಣದ ಬೆನ್ನು ಹತ್ತಿದಾಗ ಯುವತಿ ಬೆಂಗಳೂರಿನಲ್ಲಿ ತನ್ನ ಪ್ರಿಯಕರ ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಕಿರಣ್ ಎಂಬಾತನ ಜತೆ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ.
ವಿಟ್ಲ ಸಮೀಪ ಪೆರುವಾಯಿ ಗ್ರಾಮದ ಕಂಬಕೋಡಿ ನಿವಾಸಿ 23 ವರ್ಷದ ಯುವತಿ ಮೇ 29ರಂದು ಆಕೆಯ ಸ್ನೇಹಿತೆಯ ಜೊತೆ ಹೊರಗೆ ತೆರಳಿದ್ದಳು. ಬಳಿಕ ನಾಪತ್ತೆಯಾಗಿದ್ದಳು. ಈ ಬಗ್ಗೆ ಆಕೆಯ ತಂದೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ನಾಪತ್ತೆ ಪ್ರಕರಣದ ಬೆನ್ನು ಹತ್ತಿದಾಗ ಯುವತಿ ಬೆಂಗಳೂರಿನಲ್ಲಿ ತನ್ನ ಪ್ರಿಯಕರ ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಕಿರಣ್ ಎಂಬಾತನ ಜತೆ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ಈ ವಿಷಯ ತಿಳಿದು ಅಲ್ಲಿಗೆ ತೆರಳಿದ್ದ ವಿಟ್ಲ ಎಸ್ಐ ವಿನೋದ್ ಕುಮಾರ್ ಎಸ್ ಕೆ ನೇತೃತ್ವದ ಪೊಲೀಸರ ತಂಡ ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ ಯುವತಿಯನ್ನು ಪತ್ತೆ ಹಚ್ಚಿದ್ದಾರೆ.