ಬಂಟ್ವಾಳ: ಕರ್ತವ್ಯನಿರತ ಎಎಸ್ಐ ಮತ್ತು ತಾಪಂ ಮಾಜಿ ಸದಸ್ಯನ ನಡುವೆ ಲಾಕ್ಡೌನ್ ನಿಯಮ ಉಲ್ಲಂಘನೆ ವಿಷಯದ ಮಾತಿನ ಚಕಮಕಿ ನಡೆದು ವಿಕೋಪಕ್ಕೆ ತಿರುಗಿ ಇಬ್ಬರೂ ಪರಸ್ಪರ ಆರೋಪ, ಪ್ರತ್ಯಾರೋಪ ಮಾಡಿಕೊಂಡ ಘಟನೆ ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕಲ್ಲಡ್ಕ: ಎಎಸ್ಐ-ತಾಪಂ ಮಾಜಿ ಸದಸ್ಯನ ನಡುವೆ ಮಾತಿನ ಚಕಮಕಿ - ais and taluk panchayath member fight viral video
ಕರ್ತವ್ಯನಿರತ ಪೊಲೀಸ್ ಎಎಸ್ಐ ಮತ್ತು ತಾಪಂ ಮಾಜಿ ಸದಸ್ಯನ ನಡುವೆ ಲಾಕ್ಡೌನ್ ಉಲ್ಲಂಘನೆ ವಿಚಾರಕ್ಕೆ ಸಂಬಂಧಿಸಿ ಮಾತಿನ ಚಕಮಕಿ ನಡೆದು ಇಬ್ಬರೂ ಪರಸ್ಪರ ಆರೋಪ, ಪ್ರತ್ಯಾರೋಪ ಮಾಡಿಕೊಂಡ ಘಟನೆ ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಲ್ಲಡ್ಕ ವಿಡಿಯೋ ವೈರಲ್
ಕಲ್ಲಡ್ಕದಲ್ಲಿ ಎಎಸ್ಐ ಮತ್ತು ತಾಪಂ ಮಾಜಿ ಸದಸ್ಯನ ನಡುವೆ ಮಾತಿನ ಚಕಮಕಿ
ಗೋಳ್ತಮಜಲು ತಾಪಂ ಮಾಜಿ ಸದಸ್ಯ ಮಹಾಬಲ ಆಳ್ವ ಮತ್ತು ಕಲ್ಲಡ್ಕದಲ್ಲಿ ಕರ್ತವ್ಯನಿರತ ಎಎಸ್ಐ ಮಧ್ಯೆ ವಿಷಯವೊಂದಕ್ಕೆ ಸಂಬಂಧಿಸಿ ಮಾತುಕತೆ ನಡೆದಿದೆ. ಈ ಸಂದರ್ಭ ಸಾರ್ವಜನಿಕರೂ ಆಳ್ವ ಜೊತೆ ಸೇರಿದ್ದಾರೆ.
ಬಳಿಕ ಬಂಟ್ವಾಳ ನಗರ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು ಎನ್ನಲಾಗಿದೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.