ಬಂಟ್ವಾಳ: ನಗರದ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭೂಗತ ಪಾತಕಿ ರವಿ ಪೂಜಾರಿ(Gangster Ravi Pujari) ವಿರುದ್ಧ ದಾಖಲಾಗಿದ್ದ ಬೆದರಿಕೆ ದೂರಿಗೆ ಸಂಬಂಧಿಸಿದಂತೆ ಬಂಟ್ವಾಳ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ಕೋರ್ಟ್ನಲ್ಲಿ(JMFC court) ಪ್ರಕರಣ ವಿಲೇವಾರಿಗೊಂಡಿದೆ.
ಬೆದರಿಕೆ ಪ್ರಕರಣ: ಭೂಗತ ಪಾತಕಿ ರವಿ ಪೂಜಾರಿ ವಿರುದ್ಧದ ಕೇಸ್ ರದ್ದು ಪಡಿಸಿದ ಕೋರ್ಟ್
ಭೂಗತ ಪಾತಕಿ ರವಿ ಪೂಜಾರಿ ವಿರುದ್ಧ ದಾಖಲಾಗಿದ್ದ ಬೆದರಿಕೆ ಪ್ರಕರಣ (Threat case ) ವಿಚಾರಣೆಯ ಹಂತದಲ್ಲಿರುವ ವೇಳೆಯಲ್ಲಿ ದೂರುದಾರರು ಪ್ರಕರಣವನ್ನು ಮುಂದುವರೆಸದಿರಲು ನಿರ್ಧರಿಸದ ಕಾರಣ ಬಂಟ್ವಾಳ ಜೆಎಂಎಫ್ಸಿ ನ್ಯಾಯಾಲಯ(JMFC court) ಪ್ರಕರಣವನ್ನು ರದ್ದುಪಡಿಸಿದೆ.
ಭೂಗತ ಪಾತಕಿ ರವಿ ಪೂಜಾರಿ
ವಿಟ್ಲ ಪೊಲೀಸ್ ಠಾಣೆಯಲ್ಲಿ ಈ ಕುರಿತು 2010ರಲ್ಲಿ ಪ್ರಕರಣ ದಾಖಲಾಗಿತ್ತು. ರವಿ ಪೂಜಾರಿ (Gangster Ravi Pujari) ವಿರುದ್ಧ ವಿಟ್ಲ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು. ಬಳಿಕ ಆರೋಪಿ ವಿರುದ್ಧ ದೂರುದಾರರು ಪ್ರಕರಣ ಮುಂದುವರಿಸದೇ ಇರಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ಕೋರ್ಟ್ ರದ್ದುಪಡಿಸಿದೆ.
ಇದನ್ನೂ ಓದಿ:Kulgam Encounter: ಕುಲ್ಗಾಮ್‌ನಲ್ಲಿ ಐವರು ಉಗ್ರರ ಹತ್ಯೆಗೈದ ಭದ್ರತಾಪಡೆ