ಮಂಗಳೂರು:ಬಿಜೆಪಿಗೆ ತಾಕತ್ತಿದ್ದರೆ ನಳಿನ್ ಕುಮಾರ್ ಟ್ವೀಟ್ ಮಾಡಿರುವುದು ಸರಿಯಾದರೆ ಅವರ ಪರವಾಗಿ ಮೆರವಣಿಗೆ ನಡೆಸಬೇಕು. ಅವರ ಹೇಳಿಕೆ ತಪ್ಪಾಗಿದ್ದಲ್ಲಿ ನಳಿನ್ರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಹೇಳಿದರು.
ನಗರದ ಮಾತನಾಡಿದ ಅವರು, ಇಂತಹ ಸಂಸ್ಕೃತಿಯನ್ನು ಪೋಷಣೆ ಮಾಡುವುದು ದೇಶಕ್ಕೆ ಅಪಾಯಕಾರಿ ಬೆಳವಣಿಗೆ. ದೇಶಕ್ಕಾಗಿ ಪ್ರಾಣ ಕೊಟ್ಟವರನ್ನು ದೇಶದ್ರೋಹಿ ಎಂದು ಬಿಂಬಿಸಿ, ದೇಶದ್ರೋಹಿಗಳ ಪ್ರತಿಮೆ ನಿರ್ಮಿಸಿ ವೈಭವೀಕರಿಸುವವರ ಮೇಲೆ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.
ರಾಜೀವ್ ಗಾಂಧಿಯವರು 17 ಸಾವಿರಕ್ಕೂ ಹೆಚ್ಚು ಕೊಲೆ ನಡೆಸಿದ್ದಾರೆ ಎಂದಾದರೆ ಗೋದ್ರಾ ಹತ್ಯಾಕಾಂಡ, ರಾಯ್ಟಿಂಗ್ ಹತ್ಯಾಕಾಂಡಕ್ಕೆ ಕಾರಣಕರ್ತರು ಯಾರು ಎಂದು ಹೇಳಬಹುದಾ ಎಂದು ಐವನ್ ಸವಾಲೆಸೆದರು.
ಈ ಹಿಂದೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂಬ ಹೇಳಿಕೆ ನೀಡಿದ್ದರು. ಈಗ ಇಂತಹ ಹೇಳಿಕೆ. ಇದು ಮುಂದುವರಿದರೆ ದೇಶದಲ್ಲಿ ರಕ್ತ ಕ್ರಾಂತಿಯಾಗುತ್ತದೆ. ದೇಶ ವಿರೋಧಿ ಹೇಳಿಕೆ ನೀಡುವವರ ವಿರುದ್ಧ ನಮ್ಮ ಹೋರಾಟ ನಡೆದೇ ನಡೆಯುತ್ತದೆ. ಈ ದೇಶದ ಜನ ಈ ದೇಶದ ಸಂವಿಧಾನವನ್ನೇ ನಂಬಿರುವವರು. ನಮ್ಮ ದೇಶವೇ ನಮ್ಮ ಧರ್ಮ ಎನ್ನುವವರು. ಅದರ ವಿರುದ್ಧವಾಗಿರುವ ಶಕ್ತಿಗಳನ್ನು ವೈಭವೀಕರಿಸಿದರೆ ಈ ದೇಶದ ಜನತೆ ಸುಮ್ಮನಿರುವುದಿಲ್ಲ ಎಂದು ಐವನ್ ಡಿಸೋಜ ಹೇಳಿದರು.