ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆ ಅನುದಾನವನ್ನು ಒಂದಕ್ಕೆ ಮೂರು ಪಟ್ಟು ಏರಿಕೆ ಮಾಡಲಾಗಿದ್ದು, ಯಾವುದೇ ಯೋಜನೆಗಳು ಕಾರ್ಯಗತವಾಗುತ್ತಿಲ್ಲ. ಆದ್ದರಿಂದ ಈ ಬಗ್ಗೆ ಲೋಕಾಯುಕ್ತ ಅಥವಾ ಎಸಿಬಿಯಿಂದ ತನಿಖೆಯಾಗಲಿ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಆಗ್ರಹಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅವ್ಯವಹಾರ ಆರೋಪ: ಲೋಕಾಯುಕ್ತ ತನಿಖೆಗೆ ಐವನ್ ಆಗ್ರಹ
ಮಂಗಳೂರು ನಗರದ ವಸತಿ ರಹಿತರಿಗೆ ವಸತಿ ಒದಗಿಸುವ ಹಿನ್ನೆಲೆಯಲ್ಲಿ ಸರ್ವೇ ನಡೆದಿದ್ದು, ನಗರದೊಳಗೆ ಜಾಗದ ಕೊರತೆ ಇರುವ ಕಾರಣ ಫ್ಲ್ಯಾಟ್ ಗಳ ಮಾದರಿಯಲ್ಲಿ ಮನೆಗಳನ್ನು ಕಟ್ಟಿಕೊಡುವ ವ್ಯವಸ್ಥೆಯನ್ನು ಈ ಹಿಂದಿನ ಸಿದ್ದರಾಮಯ್ಯ ಸರ್ಕಾರ ಕೈಗೊಂಡಿತ್ತು. ಇದುವರೆಗೂ ಕಾರ್ಯಗತವಾಗಿಲ್ಲ. ಅಲ್ಲದೆ, ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅವ್ಯವಹಾರ ಆಗಿದೆ ಎಂದು ಐವನ್ ಡಿಸೋಜ ಆರೋಪಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅವ್ಯವಹಾರ ನಡೆದಿದ್ದು, ಇದಕ್ಕೆ ಸಾಕಷ್ಟು ದಾಖಲೆಗಳು ಇವೆ ಎಂದು ಹೇಳಿದರು. ಮಂಗಳೂರು ನಗರದ ವಸತಿ ರಹಿತರಿಗೆ ವಸತಿ ಒದಗಿಸುವ ಹಿನ್ನೆಲೆಯಲ್ಲಿ ಸರ್ವೇ ನಡೆದಿದ್ದು, ನಗರದೊಳಗೆ ಜಾಗದ ಕೊರತೆ ಇರುವ ಕಾರಣ ಫ್ಲ್ಯಾಟ್ ಗಳ ಮಾದರಿಯಲ್ಲಿ ಮನೆಗಳನ್ನು ಕಟ್ಟಿಕೊಡುವ ವ್ಯವಸ್ಥೆಯನ್ನು ಈ ಹಿಂದಿನ ಸಿದ್ದರಾಮಯ್ಯ ಸರ್ಕಾರ ಕೈಗೊಂಡಿತ್ತು. ಅದರಂತೆ 2018 ರಲ್ಲಿ 916 ಮಂದಿಯ ಹಿನ್ನೆಲೆಯನ್ನು ಗಮನಿಸಿ ನಿವೇಶನ ನೀಡುವಂತಹ ಹಂಚಿಕೆ ಪತ್ರ ವಿತರಿಸಲಾಗಿತ್ತು.
2 ವರ್ಷ 8ತಿಂಗಳಾದರೂ ಮನೆ ವಿತರಣೆ ಮಾಡಲಾಗಿಲ್ಲ. ಆ ಬಳಿಕ ಮತ್ತೆ ಚುನಾವಣೆ ನಡೆದು ಮಂಗಳೂರು ದಕ್ಷಿಣ ಹಾಗೂ ಉತ್ತರ ವಿಧಾನಸಭೆಯಲ್ಲಿ ಈಗ ಶಾಸಕರಾಗಿ ಬಿಜೆಪಿಯ ವೇದವ್ಯಾಸ ಕಾಮತ್ ಮತ್ತು ಡಾ.ವೈ. ಭರತ್ ಶೆಟ್ಟಿ ಇದ್ದಾರೆ. ಒಂದು ಮನೆಗೆ ಐದು ಲಕ್ಷ ರೂ.ನಂತೆ 30 ಕೋಟಿ ರೂ. ಯೋಜನೆ ಇದಾಗಿತ್ತು. ಇದುವರೆಗೂ ವಸತಿ ನೀಡಲು ಪ್ರಸ್ತುತ ಶಾಸಕರಿಗೆ ಇನ್ನೂ ಯಾಕೆ ಸಾಧ್ಯವಾಗಿಲ್ಲ ಎಂದು ಐವನ್ ಡಿಸೋಜ ಪ್ರಶ್ನಿಸಿದರು.