ಮಂಗಳೂರು:ನಗರದಲ್ಲಿ ಡಿ. 19ರಂದು ನಡೆದ ಗೋಲಿಬಾರ್ ಪ್ರಕರಣದ ಮೆಜಿಸ್ಟೀರಿಯಲ್ ತನಿಖೆ ನಡೆಸಲು ಘಟನೆಯ ಬಗ್ಗೆ ಮಾಹಿತಿಯುಳ್ಳ ಅಥವಾ ಪ್ರತ್ಯಕ್ಷವಾಗಿ ನೋಡಿದ ಯಾರಾದರೂ ಇದ್ದಲ್ಲಿ ನನ್ನ ಸಮಕ್ಷಮ ಹಾಜರಾಗಿ ಸಾಕ್ಷಿ ನೀಡಬಹುದು ಎಂದು ತನಿಖಾಧಿಕಾರಿ ಜಗದೀಶ್ ತಿಳಿಸಿದ್ದಾರೆ.
ಮಂಗಳೂರು ಗೋಲಿಬಾರ್ ಪ್ರಕರಣದ ಮೆಜಿಸ್ಟೀರಿಯಲ್ ತನಿಖೆ: ಸಾಕ್ಷಿ ಹೇಳಲು ಪ್ರತ್ಯಕ್ಷದರ್ಶಿಗಳಿಗೆ ಆಹ್ವಾನ - ಗೋಲಿಬಾರ್‌ಗೆ ಬಲಿಯಾದ ನೌಶಿನ್ ಮತ್ತು ಜಲೀಲ್ ಕುದ್ರೋಳಿ
ನಗರದಲ್ಲಿ ಡಿ. 19ರಂದು ನಡೆದ ಗೋಲಿಬಾರ್ ಪ್ರಕರಣದ ಮೆಜಿಸ್ಟೀರಿಯಲ್ ತನಿಖೆ ನಡೆಸಲು ಘಟನೆಯ ಬಗ್ಗೆ ಮಾಹಿತಿಯುಳ್ಳ ಅಥವಾ ಪ್ರತ್ಯಕ್ಷವಾಗಿ ನೋಡಿದ ಯಾರಾದರೂ ಇದ್ದಲ್ಲಿ ನನ್ನ ಸಮಕ್ಷಮ ಹಾಜರಾಗಿ ಸಾಕ್ಷಿ ನೀಡಬಹುದು ಎಂದು ತನಿಖಾಧಿಕಾರಿ ಜಗದೀಶ್ ತಿಳಿಸಿದ್ದಾರೆ.
ಮಂಗಳೂರು ಗೋಲಿಬಾರ್ ಪ್ರಕರಣದ, ಮೆಜಿಸ್ಟೀರಿಯಲ್ ತನಿಖೆಗೆ ಪ್ರತ್ಯಕ್ಷದರ್ಶಿಗಳಿಗೆ ಆಹ್ವಾನ ನೀಡಿದ ತನಿಖಾಧಿಕಾರಿ
ಜ. 7ರಂದು ಬೆಳಗ್ಗೆ 11 ಗಂಟೆಗೆ ನಗರದ ಮಿನಿ ವಿಧಾನಸೌಧದ ಸಹಾಯಕ ಆಯುಕ್ತರ ಕಚೇರಿಯ ನ್ಯಾಯಾಲಯದಲ್ಲಿ ಈ ಮೆಜಿಸ್ಟೀರಿಯಲ್ ತನಿಖೆ ನಡೆಯಲಿದೆ. ಅಲ್ಲದೇ ಮಂಗಳೂರಿನಲ್ಲಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ನಡೆದ ಗೋಲಿಬಾರ್‌ಗೆ ಬಲಿಯಾದ ನೌಶಿನ್ ಮತ್ತು ಜಲೀಲ್ ಕುದ್ರೋಳಿ ಸಾವಿನ ಬಗ್ಗೆ ಮೆಜಿಸ್ಟೀರಿಯಲ್ ವಿಚಾರಣೆ ನಡೆಸಲು ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಅವರನ್ನು ನೇಮಕ ಮಾಡಲಾಗಿದೆ.