ಮಂಗಳೂರು :ನಗರದ ಬಜಾಲ್ ಶಾಫಿ ಕ್ಲಿನಿಕ್ ಬಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಉತ್ತರಪ್ರದೇಶ ಮೂಲದ ವಲಸೆ ಕಾರ್ಮಿಕ ಮೇ 21ರಂದು ನಾಪತ್ತೆಯಾಗಿದ್ದು, ಇಂದು ಮುಲ್ಕಿ ಸರ್ಕಾರಿ ಆಸ್ಪತ್ರೆಯಲ್ಲಿ ಪತ್ತೆಯಾಗಿದ್ದಾರೆ.
ಫರ್ನೀಚರ್ ಪಾಲಿಶ್ ಕೆಲಸ ಮಾಡುತ್ತಿದ್ದ ರಾಮೇಶ್ವರ ಸಹಾನಿ (45) ಎಂಬಾತ ಲಾಕ್‌ಡೌನ್ ಸಡಿಲವಾದ ಬಳಿಕ ಊರಿಗೆ ಹೋಗಬೇಕೆಂದು ಮನೆಯಲ್ಲಿ ತಿಳಿಸಿದ್ದರು. ಆದರೆ, ಸಂಬಂಧಿಕರು ಇದಕ್ಕೆ ಅಸಮ್ಮತಿ ವ್ಯಕ್ತಪಡಿಸಿದ್ದರು. ಮೇ 21ರಂದು ಅವರು ದಿಢೀರನೇ ನಾಪತ್ತೆಯಾಗಿದ್ದರು. ಮೊಬೈಲ್ ಕೂಡಾ ಸ್ವಿಚ್‌ಆಫ್ ಆಗಿತ್ತು. ಅಲ್ಲದೆ ಊರಿಗೂ ಹೋಗದೆ ನಗರದ ಬಜಾಲ್‌ನಲ್ಲಿರುವ ಬಾಡಿಗೆ ಮನೆಗೂ ಹಿಂದಿರುಗದ ಕಾರಣ ಅವರ ಪುತ್ರ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಜೂನ್ 3ರಂದು ನಾಪತ್ತೆ ಪ್ರಕರಣ ದಾಖಲಿಸಿದ್ದರು.