ಮಂಗಳೂರು:ಸಾಬೂನಿನಲ್ಲಿ ಅಡಗಿಸಿಟ್ಟು ತಂದ ಭಾರಿ ಪ್ರಮಾಣದ ಚಿನ್ನವನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ ಅಧಿಕಾರಿಗಳು ಗುರುವಾರ ವಶಪಡಿಸಿಕೊಂಡಿದ್ದಾರೆ.
ಸಾಬೂನಿನಲ್ಲಿ ಅಡಗಿಸಿಟ್ಟು ಚಿನ್ನ ಸಾಗಣೆ... ಮಂಗಳೂರು ವಿಮಾನ ನಿಲ್ದಾಣದಲ್ಲಿ ಒಬ್ಬನ ಬಂಧನ - undefined
ವಿದೇಶಗಳಿಂದ ನಾನಾ ತಂತ್ರಗಾರಿಕೆ ಬಳಸಿ ಚಿನ್ನವನ್ನು ಅಕ್ರಮವಾಗಿ ತರುವಂತಹ ಪ್ರಯತ್ನಗಳು ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆಯುತ್ತಲೇ ಇದೆ. ಮತ್ತು ಆ ಪ್ರಯತ್ನ ವಿಫಲವಾಗುತ್ತಲೇ ಇದೆ. ಈಗ ಮತ್ತೆ ಪ್ರಯಾಣಿಕನೊಬ್ಬ ಸಾಬೂನಿನಲ್ಲಿ ಅಡಗಿಸಿಟ್ಟು ತಂದ ಚಿನ್ನವನ್ನು ನಿಲ್ದಾಣದ ಕಸ್ಟಮ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಪ್ರಕರಣ ಸಂಬಂಧ ಒಬ್ಬ ಪ್ರಯಾಣಿಕನನ್ನು ಬಂಧಿಸಲಾಗಿದೆ. ಶಾರ್ಜಾದಿಂದ ಬಂದಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಪ್ರಯಾಣಿಕನ ಬ್ಯಾಗ್ನಲ್ಲಿ ಇದ್ದ ನಾಲ್ಕು ಸಾಬೂನು ಪ್ಯಾಕೆಟ್ನ ಒಳಗೆ ಸಾಬೂನು ಆಕಾರದಲ್ಲಿದ್ದ ಚಿನ್ನವನ್ನು ಪತ್ತೆಹಚ್ಚಿದ್ದಾರೆ. 24 ಕ್ಯಾರೆಟ್ನ 91.05 ಗ್ರಾಂ ಚಿನ್ನ ಇದರಲ್ಲಿತ್ತು. ಈ ಚಿನ್ನದ ಮೌಲ್ಯ 2.97 ಲಕ್ಷ ಎಂದು ಅಂದಾಜಿಸಲಾಗಿದೆ.
ಇನ್ನು ನಾನಾ ತಂತ್ರಗಳನ್ನು ಬಳಸಿ ಅಕ್ರಮವಾಗಿ ಚಿನ್ನವನ್ನು ಸಾಗಿಸುವ ಪ್ರಯತ್ನಗಳು ವಿಮಾನ ನಿಲ್ದಾಣದಲ್ಲಿ ವಿಫಲವಾಗಿದೆ. ಇತ್ತೀಚೆಗೆ ಮಿಕ್ಸಿಯ ಮೋಟಾರಿನಲ್ಲಿ ಅಡಗಿಸಿಟ್ಟು ತಂದಿದ್ದ ಚಿನ್ನವನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದರು.