ಕರ್ನಾಟಕ

karnataka

ETV Bharat / city

ಅಕ್ರಮ ಮಾಂಸ ಸಾಗಾಟ : ದನದ ಮಾಂಸವಾ, ಎತ್ತಿನ ಮಾಂಸವಾ ಎನ್ನುವುದೇ ಸಂಶಯ..​ - ಅಕ್ರಮ ಮಾಂಸ ಸಾಗಾಟ

ಮಾಂಸವನ್ನು ಲ್ಯಾಬ್​ಗೆ ಕಳುಹಿಸಲಾಗಿದೆ. ಮಾರುಕಟ್ಟೆ ಅಭಿವೃದ್ಧಿ ಸಂದರ್ಭ ತಾತ್ಕಾಲಿಕ ಬೀಫ್ ಶೆಡ್‌ನ ತೊಕ್ಕೊಟ್ಟು ಒಳಪೇಟೆಯ ರೈಲ್ವೆ ಜಾಗಕ್ಕೆ ಸಂಬಂಧಿಸಿರುವ ಪ್ರದೇಶದಲ್ಲಿ ನಿರ್ಮಿಸಲಾಗಿತ್ತು..

illegal-cattle-meat-trafficking-caught-in-ullala
ಅಕ್ರಮ ಮಾಂಸ ಸಾಗಾಟ

By

Published : Feb 27, 2021, 9:18 PM IST

ಉಳ್ಳಾಲ :ಸ್ಕೂಟರ್​ನಲ್ಲಿ ದನದ ಮಾಂಸ ಸಾಗಾಟ ನಡೆಸುತ್ತಿದ್ದ ತೊಕ್ಕೊಟ್ಟು ಒಳಪೇಟೆಯ ಬೀಫ್ ಅಂಗಡಿ ಮಾಲೀಕನನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಜರಂಗದಳದ ಕಾರ್ಯಕರ್ತರು ಹನೀಫ್​​ ಎಂಬಾತನನ್ನು ಸೆರೆಹಿಡಿದು ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದಾರೆ‌. ಕೆ.ಸಿ ರೋಡು ಕಡೆಯಿಂದ ತೊಕ್ಕೊಟ್ಟು ಕಡೆಗೆ 40 ಕೆ.ಜಿ ಯಷ್ಟು ದನದ ಮಾಂಸವನ್ನು ಸ್ಕೂಟರಿನಲ್ಲಿ ಹನೀಫ್​​ ತರುತ್ತಿದ್ದ.

ಸದ್ಯ ಆರೋಪಿ ಹನೀಫ್​​​ 78 ಕೆ.ಜಿ ಮಾಂಸ ಖರೀದಿಸಿರುವ ಬಿಲ್‌ನ ಪೊಲೀಸರಿಗೆ ನೀಡಿದ್ದು, ದನದ ಮಾಂಸವಲ್ಲ ಅದು ಎತ್ತುಗಳ ಮಾಂಸ ಎನ್ನುವ ಕುರಿತು ಪೊಲೀಸರಿಗೆ ಸಂಶಯ ವ್ಯಕ್ತವಾಗಿದೆ.

ಮಾಂಸವನ್ನು ಲ್ಯಾಬ್​ಗೆ ಕಳುಹಿಸಲಾಗಿದೆ. ಮಾರುಕಟ್ಟೆ ಅಭಿವೃದ್ಧಿ ಸಂದರ್ಭ ತಾತ್ಕಾಲಿಕ ಬೀಫ್ ಶೆಡ್‌ನ ತೊಕ್ಕೊಟ್ಟು ಒಳಪೇಟೆಯ ರೈಲ್ವೆ ಜಾಗಕ್ಕೆ ಸಂಬಂಧಿಸಿರುವ ಪ್ರದೇಶದಲ್ಲಿ ನಿರ್ಮಿಸಲಾಗಿತ್ತು.

ABOUT THE AUTHOR

...view details