ಮಂಗಳೂರು:ರಾಜ್ಯದಲ್ಲಿ ನಡೆಯುತ್ತಿರುವ ಧರ್ಮ ಕಲಹಗಳನ್ನು ಬದಿಗೊತ್ತಿ ಶಾಂತಿ, ಸಮಾನತೆಯನ್ನು ಸಾರಲು ಮಂಗಳೂರಿನ ಆಲದ ಮರದಡಿ ನಡೆದ ಸರ್ವಧರ್ಮಗಳ ಇಫ್ತಾರ್ ಮುಸ್ಸಂಜೆ ಗಮನ ಸೆಳೆಯಿತು. ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ ಅವರ ನೇತೃತ್ವದ ಸಹಕಾರ ನ್ಯಾಯ ಕೂಟದಿಂದ ಶಾಂತಿ ಸಮಾನತೆಗಾಗಿ ಇಫ್ತಾರ್ ಮುಸ್ಸಂಜೆ ಕಾರ್ಯಕ್ರಮ ಜರುಗಿತು.
ಈ ವಿಶೇಷ ಇಫ್ತಾರ್ ಮುಸ್ಸಂಜೆ ಕಾರ್ಯಕ್ರಮದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು, ಜೈನರು ಜೊತೆಗೂಡಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ವೇದಿಕೆಯಲ್ಲೇ ಮಗ್ರಿಬ್ ಬಾಂಗ್ ಕರೆ ಕೊಟ್ಟು ಅದರೊಂದಿಗೆ ಉಪವಾಸ ನಡೆಸುತ್ತಿರುವ ಮುಸ್ಲಿಮರು ವ್ರತ ತೊರೆದರೆ, ಇತರರು ಅವರೊಂದಿಗೆ ಭಾಗಿಯಾದರು. ನಾದ ಮಣಿನಾಲ್ಕೂರು ಅವರ ಭಾವೈಕ್ಯತೆ ಸಾರುವ ಕತ್ತಲ ಹಾಡುಗಳು ಗಮನ ಸೆಳೆದವು.