ಮಂಗಳೂರು: ಮಂಗಳೂರಿನ ಐಡಿಯಲ್ ಹಾಗೂ ಪಬ್ಬಾಸ್ ಐಸ್ ಕ್ರೀಂ ಸಂಸ್ಥೆ ಮಾಲೀಕರಾದ ಶಿಬರೂರು ಪ್ರಭಾಕರ ಕಾಮತ್ ಇಂದು ಮುಂಜಾನೆ 3.30ಕ್ಕೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಮಂಗಳೂರಿನ ಐಡಿಯಲ್ ಐಸ್ ಕ್ರೀಂ ಮಾಲೀಕ ನಿಧನ - Pabbas Ice Cream
ಐಡಿಯಲ್ ಹಾಗೂ ಪಬ್ಬಾಸ್ ಐಸ್ ಕ್ರೀಂ ಸಂಸ್ಥೆ ಮಾಲೀಕರಾದ ಶಿಬರೂರು ಪ್ರಭಾಕರ ಕಾಮತ್ ಇಂದು ವಿಧಿವಶರಾಗಿದ್ದಾರೆ.
ಶಿಬರೂರು ಪ್ರಭಾಕರ ಕಾಮತ್
ಶಿಬರೂರು ಪ್ರಭಾಕರ ಕಾಮತ್ (79) ಅವರು ಅಕ್ಟೋಬರ್ 29 ರಂದು ಬಿಜೈನಲ್ಲಿರುವ ಅವರ ಮನೆ ಸಮೀಪದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ನಂತರ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಐಡಿಯಲ್ ಎಂಬ ಬ್ರಾಂಡ್ನಲ್ಲಿ ಐಸ್ ಕ್ರೀಂ ಸಂಸ್ಥೆ ಆರಂಭಿಸಿದ ಶಿಬರೂರು ಪ್ರಭಾಕರ ಅವರು ಪರ್ತಗಾಳಿ ಗೋಕರ್ಣ ಮಠದ ಟ್ರಸ್ಟಿಯಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ.