ಕರ್ನಾಟಕ

karnataka

ETV Bharat / city

ಬೇರು ಹುಳಕ್ಕೆ ಮದ್ದರೆದ ಐಸಿಎಆರ್ ಸಿಪಿಸಿಆರ್​​ಐ: ರೈತರ ಸಮಸ್ಯೆಗೆ ಇಲ್ಲಿದೆ ಪರಿಹಾರ - ಮಂಗಳೂರು

ಕಾಂಡವನ್ನೇ ಕೊರೆದು ಕೃಷಿಗೆ ಹಾನಿ ಮಾಡುವ ಬೇರು ಹುಳಗಳಿಗೆ ದುಸ್ವಪ್ನವಾದ ಹುಳವೊಂದನ್ನು ವಿಜ್ಞಾನಿಗಳು ತಯಾರಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ತೆಂಗು ರೈತ ಉತ್ಪಾದಕರ ಕಂಪನಿ ಇದನ್ನು ಉತ್ಪಾದಿಸಿ ಮಾರುಕಟ್ಟೆಗೆ ಬಿಟ್ಟಿದೆ.

ICAR CPCRI solution to Rootworm problem
ಬೇರು ಹುಳಕ್ಕೆ ಮದ್ದರೆದ ಐಸಿಎಆರ್ ಸಿಪಿಸಿಆರ್​​ಐ

By

Published : Aug 8, 2022, 1:16 PM IST

ಮಂಗಳೂರು:ತೆಂಗು, ಭತ್ತ, ಕಬ್ಬು ಕೃಷಿ ಸೇರಿದಂತೆ ಹಲವು ಕೃಷಿಗಳಿಗೆ ಬೇರು ಹುಳ ಬಹುದೊಡ್ಡ ಸಮಸ್ಯೆ. ಕಾಂಡವನ್ನೇ ಕೊರೆದು ಕೃಷಿಗೆ ಹಾನಿ ಮಾಡುವ ಬೇರು ಹುಳಗಳಿಗೆ ರಾಸಾಯನಿಕ ಬಳಸಿ ಪರಿಹಾರ ಮಾಡಲು ರೈತರು ಪ್ರಯತ್ನಿಸುತ್ತಾರೆ. ಇದರಿಂದ ನಿರೀಕ್ಷಿತ ಫಲಿತಾಂಶ ಬಾರದೇ ಇರುವುದರ ಜತೆಗೆ ಮಣ್ಣಿನ ಫಲವತ್ತತೆ ನಾಶವಾಗಲಿದೆ.

ಬೇರು ಹುಳಕ್ಕೆ ಮದ್ದರೆದ ಐಸಿಎಆರ್ ಸಿಪಿಸಿಆರ್​​ಐ..

ರೈತರ ಈ ಸಮಸ್ಯೆಗೆ ಕೇಂದ್ರ ಸರ್ಕಾರದ ಐಸಿಎಆರ್ ಸಿಪಿಸಿಆರ್​​ಐ(ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್- ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ) ಸಂಸ್ಥೆ ಪರಿಹಾರವಾಗಿ ಹುಳವೊಂದನ್ನು ಸೃಷ್ಟಿಸಿದೆ.

ಪ್ರಯೋಗಾಲಯದಲ್ಲಿ ಸೃಷ್ಟಿಯಾದ ಈ ಹುಳ ಬೇರುಹುಳಗಳಿಗೆ ದುಸ್ವಪ್ನದಂತೆ ಕಾಡಲಿದೆ. ಸೂಕ್ಷ್ಮವಾಗಿರುವ ಈ ಹುಳಗಳು ಭೂಮಿಗೆ ಸೇರಿದಂತೆ ಬೇರು ಹುಳಗಳ ಹುಡುಕಾಡಿ ತನ್ನಿಂದ ರಾಸಾಯನಿಕ ಹೊರಸೂಸಿ ಅವುಗಳನ್ನು ಕೊಲ್ಲುತ್ತದೆ. ಈ ಮೂಲಕ ಕೃಷಿಕರಿಗೆ ಮಾರಕವಾದ ಬೇರುಹುಳಗಳನ್ನು ಅದು ಸರ್ವನಾಶ ಮಾಡುತ್ತದೆ.

ಐಸಿಎಆರ್ ಸಿಪಿಸಿಆರ್​ಐ ಸಂಸ್ಥೆ ಸೃಷ್ಟಿಸಿದ ಈ ಹುಳಗಳನ್ನು ದಕ್ಷಿಣ ಕನ್ನಡ ಜಿಲ್ಲಾ ತೆಂಗು ರೈತ ಉತ್ಪಾದಕರ ಕಂಪನಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ತಂತ್ರಜ್ಞಾನವನ್ನು ಖರಿದೀಸಿದ ಈ ಸಂಸ್ಥೆ ಎಂಟೊಮೊಪಾಥೋಜೆನಿಕ್ ನೆಮಟೋಡ್ಸ್ (EPN) ಎಂಬ ಹುಳಗಳನ್ನು ಮಾರುಕಟ್ಟೆಗೆ ಬಿಟ್ಟಿದೆ.

ಈಗಾಗಲೇ ಹಲವೆಡೆ ಈ ಉತ್ಪನ್ನ ರೈತರಿಗೆ ಬೇರುಹುಳದ ಸಮಸ್ಯೆ ನಿವಾರಿಸಿದೆ. ತೆಂಗು ಕೃಷಿ ಸೇರಿದಂತೆ ಹಲವು ಕೃಷಿಗಳಿಗೆ ಭಾದಕವಾಗಿರುವ ಈ ಬೇರುಹುಳಗಳಿಂದ‌ ಸಮಸ್ಯೆಗೀಡಾಗಿರುವ ರೈತರು ದಕ್ಷಿಣ ಕನ್ನಡ ಜಿಲ್ಲಾ ತೆಂಗು ರೈತ ಉತ್ಪಾದಕರ ಕಂಪನಿ ಉತ್ಪಾದಿಸುತ್ತಿರುವ ಉತ್ಪನ್ನದಿಂದ ಪ್ರಯೋಜನ ಪಡೆಯುತ್ತಿದ್ದಾರೆ.

ಈ ENTOMO PATHOGENIC NEMATODE (ಎಂಟೊಮೊಪಾಥೋಜೆನಿಕ್ ನೆಮಟೋಡ್ಸ್) ಉತ್ಪನ್ನವನ್ನು ದಕ್ಷಿಣ ಕನ್ನಡ ಜಿಲ್ಲಾ ತೆಂಗು ರೈತ ಉತ್ಪಾದಕರ ಕಂಪನಿ ತನ್ನ ಪುತ್ತೂರಿನಲ್ಲಿ ಇರುವ ಪ್ರಯೋಗಾಲಯದಲ್ಲಿ ತಯಾರಿಸುತ್ತಿದೆ. ಇದರ ಒಂದು ಬಾಕ್ಸ್​​ನ ಬೆಲೆ ರೂ 100. ಈ ಬಾಕ್ಸ್ ನಲ್ಲಿರುವ ಸೂಕ್ಷವಾಗಿರುವ ಹುಳಗಳನ್ನು 10 ಲೀ.ನೀರಿಗೆ ಮಿಶ್ರಣ ಮಾಡಬೇಕು.

ಒಂದು ತೆಂಗಿನಮರಕ್ಕೆ ಅರ್ಧ ಲೀ. ಹುಳವಿರುವ ನೀರನ್ನು ಬುಡಕ್ಕೆ ಹಾಕಿದರೆ ಅದು ಕಾರ್ಯ ನಿರ್ವಹಿಸಲು ಆರಂಭಿಸುತ್ತದೆ. ಬುಡದಲ್ಲಿ ಇರುವ ಬೇರುಹುಳ ಪ್ರಭೇದವನ್ನು ಲಾರ್ವ ಹಂತದಲ್ಲಿಯೇ ಅದು ಹುಡುಕಿ ಕೊಲ್ಲುತ್ತದೆ. ಅಲ್ಲದೇ ತನ್ನ ಸಂಖ್ಯೆಯನ್ನು ವೃದ್ದಿಸುತ್ತದೆ. ಈ ರೈತ ಸ್ನೇಹಿ ಹುಳದ ಜೀವಿತಾವಧಿ ಮೂರು ತಿಂಗಳು. ರೈತರು ಸಂಪರ್ಕಿಸಬಹುದಾದ ಸಂಖ್ಯೆ- 7338567763- ಚೇತನ್ ಎ.-ದಕ್ಷಿಣ ಕನ್ನಡ ಜಿಲ್ಲಾ ತೆಂಗು ರೈತ ಉತ್ಪಾದಕರ ಕಂಪನಿ ಸಿಇಒ.

ಇದನ್ನೂ ಓದಿ:ತುಮಕೂರು: ತೋಟಕ್ಕೆ ನುಗ್ಗಿದ ಕೆರೆ ನೀರು, ನೂರಾರು ಎಕರೆ ಅಡಕೆ ಬೆಳೆ ನಾಶ

ABOUT THE AUTHOR

...view details