ಕರ್ನಾಟಕ

karnataka

ETV Bharat / city

'ನನಗೆ ಮುಸ್ಲಿಮರ ಮತಗಳ ಅಗತ್ಯವಿಲ್ಲ, ಹಿಂದೂಗಳ ಮತಗಳು ಸಾಕು': ಶಾಸಕ ಹರೀಶ್ ಪೂಂಜಾ - Harish poonja controversial statement

ಮುಂದಿನ ಚುನಾವಣೆಗೆ ಸಂಘದ ಹಿರಿಯರು ಸೂಚಿಸಿದ್ರೆ ಸ್ಪರ್ಧೆ ಮಾಡುತ್ತೇನೆ. ಆದರೆ ಆಗ ನನಗೆ ಮುಸ್ಲಿಮರ ಮತಗಳು ಬೇಡ, ಕೇವಲ ಹಿಂದೂಗಳ ಮತಗಳು ಮಾತ್ರ ಸಾಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿಕೆ ನೀಡಿದ್ದಾರೆ.

MLA Harish poonja statement
ಶಾಸಕ ಹರೀಶ್ ಪೂಂಜ

By

Published : May 17, 2022, 11:14 AM IST

Updated : May 17, 2022, 11:21 AM IST

ಬೆಳ್ತಂಗಡಿ (ದಕ್ಷಿಣ ಕನ್ನಡ):ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜದ ಕೆಳಗೆ ಭಗವಾಧ್ವಜ ಹಾರಲಿದೆ ಎಂಬ ಹೇಳಿಕೆ ನೀಡಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. 'ನನಗೆ ಮುಸ್ಲಿಂ ಮತಗಳು ಬೇಡ, ಹಿಂದೂಗಳ ಮತಗಳು ಮಾತ್ರ ಸಾಕು' ಎಂದಿದ್ದು ಚರ್ಚೆಗೆ ಕಾರಣವಾಗಿದೆ.


ಸೋಮವಾರ ಬೆಳ್ತಂಗಡಿಯ ಶುಭೋದಯ ಯುವಕ ಮಂಡಲ ಸಾವ್ಯ ಗುಜ್ಜೊಟ್ಟು ಆಶ್ರಯದಲ್ಲಿ ನಡೆದ 11ನೇ ವರ್ಷದ ಶನಿಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 'ಮುಂದಿನ ಚುನಾವಣೆಗೆ ಸಂಘದ ಹಿರಿಯರು ಸೂಚಿಸಿದ್ರೆ ಸ್ಪರ್ಧೆ ಮಾಡುತ್ತೇನೆ. ಆಗ ನನಗೆ ಮುಸ್ಲಿಮರ ಮತಗಳು ಬೇಡ, ಕೇವಲ ಹಿಂದೂಗಳ ಮತಗಳು ಮಾತ್ರ ಸಾಕು ಎಂದು ತಾಕತ್ತಿನಿಂದ ಹೇಳುತ್ತೇನೆ. ಯಾಕೆಂದರೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಆಗಬೇಕು, ಕಾಶಿಯಲ್ಲಿ ವಿಶ್ವನಾಥ ದೇವರ ಮಂದಿರ ನಿರ್ಮಾಣ ಆಗಬೇಕು, ದತ್ತ ಪೀಠದಲ್ಲಿ ದತ್ತಾತ್ರೇಯರ ಮಂದಿರ ನಿರ್ಮಾಣ ಆಗಬೇಕಿದೆ. ಹೀಗಾಗಿ ಮುಸ್ಲಿಮರ ಮತಗಳು ಬೇಡವೆಂದು ಧೈರ್ಯದಿಂದ ಹೇಳುವೆ' ಎಂದರು.

ಇದನ್ನೂ ಓದಿ:ಚಾಮರಾಜನಗರ: ಬುದ್ಧ ಪೂರ್ಣಿಮೆಯ ದಿನ ಬೌದ್ಧ ಧರ್ಮ ಸ್ವೀಕರಿಸಿದ 14 ಮಂದಿ

Last Updated : May 17, 2022, 11:21 AM IST

ABOUT THE AUTHOR

...view details