ಮಂಗಳೂರು :ಸಂಚರಿಸುತ್ತಿದ್ದ ಜನರ ಮೇಲೆ ಹೆಜ್ಜೇನು ದಾಳಿ ಮಾಡಿದ್ದರಿಂದ ಗಾಯಗೊಂಡ 8 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರು ಹೊರವಲಯದ ಕಿನ್ನಿಗೋಳಿಯ ಮೂರು ಕಾವೇರಿ ಎಂಬಲ್ಲಿ ಈ ಘಟನೆ ನಡೆದಿದೆ.
ಮಂಗಳೂರಿನಲ್ಲಿ ಹೆಜ್ಜೇನು ದಾಳಿ : 8 ಮಂದಿ ಆಸ್ಪತ್ರೆಗೆ ದಾಖಲು - ಮಂಗಳೂರಿನಲ್ಲಿ ಹೆಜ್ಜೇನು ದಾಳಿ
ಬೆಳಗ್ಗೆ ವಾಕಿಂಗ್ ಹೋಗುತ್ತಿದ್ದವರು, ಕೆಲಸಕ್ಕೆ ಹೋಗುತ್ತಿದ್ದವರ ಮೇಲೆ ಏಕಾಏಕಿ ದಾಳಿ ನಡೆಸಿವೆ. ಗೂಡಿಗೆ ಹಾನಿಯಾದ ಕಾರಣದಿಂದ ಹೆಜ್ಜೇನುಗಳು ಜನರ ಮೇಲೆ ದಾಳಿ ಮಾಡಿವೆ..
ಮಂಗಳೂರು
ಇಲ್ಲಿನ ರಾಜ್ ಹೆರಿಟೇಜ್ ಎಂಬ ಕಟ್ಟಡದಲ್ಲಿ ಗೂಡು ಕಟ್ಟಿದ್ದ ಹೆಜ್ಜೇನುಗಳು ಬೆಳಗ್ಗೆ ವಾಕಿಂಗ್ ಹೋಗುತ್ತಿದ್ದವರು, ಕೆಲಸಕ್ಕೆ ಹೋಗುತ್ತಿದ್ದವರ ಮೇಲೆ ಏಕಾಏಕಿ ದಾಳಿ ನಡೆಸಿವೆ. ಗೂಡಿಗೆ ಹಾನಿಯಾದ ಕಾರಣದಿಂದ ಹೆಜ್ಜೇನುಗಳು ಜನರ ಮೇಲೆ ದಾಳಿ ಮಾಡಿವೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಹಾವನ್ನೇ ಹಗ್ಗವಾಗಿಸಿಕೊಂಡು ಸ್ಕಿಪ್ಪಿಂಗ್ ಮಾಡಿದ ಯುವಕ.. ವಿಡಿಯೋ ವೈರಲ್