ಮಂಗಳೂರು: ಕೊರೊನಾ ವೈರಸ್ ಸಾಮುದಾಯಿಕವಾಗಿ ಹರಡುವುದನ್ನು ತಡೆಯಲು ಹೋಮ್ ಕ್ವಾರಂಟೈನ್ ಮತ್ತು ಸಾಮಾಜಿಕ ಅಂತರ ಪಾಲಿಸಿ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಕರೆ ನೀಡಿದ್ದಾರೆ.
ಕೊರೊನಾ ಹರಡುವಿಕೆ ತಡೆಯಲು ಹೋಮ್ ಕ್ವಾರಂಟೈನ್ 14 ದಿನ ಪಾಲಿಸಿ: ಡಿಸಿ
ವಿದೇಶದಿಂದ ಬಂದ ಪ್ರಯಾಣಿಕರಲ್ಲಿ ಕೊರೊನಾ ವೈರಸ್ ಲಕ್ಷಣ ಇಲ್ಲದಿದ್ದರೆ ಅವರು ಹೋಮ್ ಕ್ವಾರಂಟೈನ್ ಆಗಿ 14 ದಿನ ಮನೆಯಲ್ಲಿ ಇರಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಕರೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ವಾರ್ತಾ ಇಲಾಖೆಯ ಸಹಯೋಗದಲ್ಲಿ ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ವಿದೇಶದಿಂದ ಬಂದ ಪ್ರಯಾಣಿಕರಲ್ಲಿ ಕೊರೊನಾ ವೈರಸ್ ಲಕ್ಷಣ ಇಲ್ಲದಿದ್ದರೆ ಅವರು ಹೋಮ್ ಕ್ವಾರಂಟೈನ್ ಆಗಿ 14 ದಿನ ಮನೆಯಲ್ಲಿ ಇರಬೇಕು. ವಿಮಾನ ನಿಲ್ದಾಣದಲ್ಲಿ ಅವರಿಗೆ ಹೋಮ್ ಕ್ವಾರಂಟೈನ್ ಆಗಿ ಯಾವ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಲಾಗುತ್ತದೆ. ಇದನ್ನು ಅವರು ಮನೆಯಲ್ಲಿ ಪಾಲಿಸಬೇಕು. ಅದೇ ರೀತಿ ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.
ಇದನ್ನು ಅವರು ಮನೆಯಲ್ಲಿ ಪಾಲಿಸಬೇಕು. ಅದೇ ರೀತಿ ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಇದರಿಂದ ಕೊರೊನಾ ವೈರಸ್ ಸಾಮುದಾಯಿಕವಾಗಿ ಹಬ್ಬುವುದನ್ನು ತಡೆಯಬಹುದು ಎಂದರು.