ಕರ್ನಾಟಕ

karnataka

ETV Bharat / city

ಶಾಲಾರಂಭ ದಿನ ದ.ಕನ್ನಡದ ಕೆಲ ಶಾಲೆಗಳಲ್ಲಿ ಹೋಮ-ಹವನ: ವರದಿ ಕೇಳಿದ ಡಿಸಿ - ದಕ್ಷಿಣ ಕನ್ನಡ ಧರ್ಮಯುದ್ಧ

ಜಿಲ್ಲೆಯ ಕೆಲವು ಶಾಲೆಗಳಲ್ಲಿ ಸೋಮವಾರ ಹೋಮ, ಹವನ ನಡೆಸಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

dc kv rajendra
ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ

By

Published : May 19, 2022, 8:06 AM IST

ಬಂಟ್ವಾಳ: ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಪಡಿಬಾಗಿಲು ಶಾಲೆ ಸೇರಿದಂತೆ ಜಿಲ್ಲೆಯ ಕೆಲವು ಶಾಲೆಗಳಲ್ಲಿ ಸೋಮವಾರ ವೈದಿಕ ಆಚರಣೆಯಾದ ಹೋಮ, ಹವನ ನಡೆಸಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಸಂಬಂಧ ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಡಿಡಿಪಿಐಯಿಂದ ವರದಿ ಕೇಳಿದ್ದಾರೆ.


ಶಿಕ್ಷಕರು, ಊರಿನ ಗಣ್ಯರು, ಜನಪ್ರತಿನಿಧಿಗಳು ಮಕ್ಕಳಿಗೆ ಹೂ ನೀಡಿ ಶಾಲೆಗೆ ಸ್ವಾಗತಿಸುವುದು ವಾಡಿಕೆ. ಶಾಲಾ ಪ್ರಾರಂಭೋತ್ಸವ ಸಂದರ್ಭದಲ್ಲಿ ಶಾಲೆಯನ್ನು ತಳಿರು ತೋರಣ, ಹೂಗಳಿಂದ ಶೃಂಗರಿಸಲಾಗಿರುತ್ತದೆ. ಆದರೆ ಇಲ್ಲಿನ ಶಾಲೆಗಳಲ್ಲಿ ವೈದಿಕ ಆಚರಣೆ ನಡೆಸಲಾಗಿದೆ ಎಂಬ ವಿಚಾರವೀಗ ಸದ್ದು ಮಾಡುತ್ತಿದೆ. ಕೆಲ ದಿನಗಳ ಹಿಂದೆ ಹಿಜಾಬ್ ವಿಚಾರ ಮುನ್ನೆಲೆಯಲ್ಲಿದ್ದ ಸಂದರ್ಭ ಸಮಾನತೆ ಪಾಲಿಸಬೇಕು ಎಂದು ಹಿಂದೂ ಸಂಘಟನೆಗಳು ಒತ್ತಾಯಿಸಿದ್ದವು. ಇದೀಗ ಹೋಮ ಹವನಕ್ಕೆ ಆಕ್ಷೇಪಗಳು ಕೇಳಿಬಂದಿವೆ.

ಇದನ್ನೂ ಓದಿ:ಮಾದಕ ವಸ್ತು ತಡೆ ಕಾಯ್ದೆಯಡಿ ಜಪ್ತಿಯಾದ ವಾಹನಗಳ ಹಿಂದಿರುಗಿಸುವಿಕೆ: ಹೈಕೋರ್ಟ್‌ ಹೇಳಿದ್ದೇನು?

ABOUT THE AUTHOR

...view details