ಕರ್ನಾಟಕ

karnataka

ETV Bharat / city

ಹಿಜಾಬ್‌ ವಿವಾದ: ಮಂಗಳೂರಿನಲ್ಲಿ 2ನೇ ದಿನವೂ ಪರೀಕ್ಷೆ ಬರೆಯದ 32 ವಿದ್ಯಾರ್ಥಿನಿಯರು - ಕರ್ನಾಟಕದಲ್ಲಿ ಹಿಜಾಬ್‌ ವಿವಾದ ವಿಚಾರ

ಮಂಗಳೂರಿನಲ್ಲಿ ಹಿಜಾಬ್‌ ವಿವಾದ ಮುಂದುವರೆದಿದ್ದು, ಇಂದು ಕೂಡ 32 ವಿದ್ಯಾರ್ಥಿಗಳು ಪರೀಕ್ಷೆ ಬರೆಯದೇ ವಾಪಸ್‌ ಆಗಿರುವ ಘಟನೆ ವಾಮಂಜೂರಿನ ಸೈಂಟ್ ರೇಮೇಂಡ್ಸ್ ಪಿಯು ಕಾಲೇಜಿನಲ್ಲಿ ನಡೆದಿದೆ.

Hijab Issue; 32 student not written exam on 2nd day also in mangalore
ಹಿಜಾಬ್‌ ವಿವಾದ: ಮಂಗಳೂರು ವಾಮಂಜೂರಿನ ಸೈಂಟ್ ರೇಮೇಂಡ್ಸ್‌ನಲ್ಲಿ 2ನೇ ದಿನವೂ ಪರೀಕ್ಷೆ ಬರೆಯದ 32 ವಿದ್ಯಾರ್ಥಿನಿಯರು

By

Published : Mar 22, 2022, 1:09 PM IST

Updated : Mar 22, 2022, 2:22 PM IST

ಮಂಗಳೂರು: ಮಂಗಳೂರಿನ ವಾಮಂಜೂರಿನ ಸೈಂಟ್ ರೇಮೇಂಡ್ಸ್ ಪಿಯು ಕಾಲೇಜಿನಲ್ಲಿ ಹಿಜಾಬ್ ವಿವಾದದಿಂದ ಗೊಂದಲ ಮುಂದುವರೆದಿದ್ದು, ಎರಡನೇ ದಿನವೂ 32 ವಿದ್ಯಾರ್ಥಿನಿಯರು ಪರೀಕ್ಷೆ ಬರೆಯದೇ ವಾಪಸಾಗಿದ್ದಾರೆ.

ಹಿಜಾಬ್‌ ವಿವಾದ: ಮಂಗಳೂರಿನಲ್ಲಿ 2ನೇ ದಿನವೂ ಪರೀಕ್ಷೆ ಬರೆಯದ 32 ವಿದ್ಯಾರ್ಥಿನಿಯರು

ಸೈಂಟ್ ರೇಮೇಂಡ್ಸ್ ಪಿಯು ಕಾಲೇಜಿನಲ್ಲಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಯುತ್ತಿದೆ. ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಪರೀಕ್ಷೆಗೆ ಆಗಮಿಸಿದ್ದರು. ಹಿಜಾಬ್ ತೆಗೆದು ಪರೀಕ್ಷೆ ಬರೆಯುವಂತೆ ಸೂಚಿಸಿದರೂ ಹಿಜಾಬ್ ತೆಗೆಯಲು ವಿದ್ಯಾರ್ಥಿನಿಯರು ನಿರಾಕರಿಸಿದ್ದರು. ನಿನ್ನೆ ವಿದ್ಯಾರ್ಥಿನಿಯರು ಹೊರಬಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಇಂದು ಕೂಡ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲು ಬಂದಿದ್ದು, ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿಲ್ಲ. ಮೂವರು ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ಪರೀಕ್ಷೆ ಬರೆದಿದ್ದಾರೆ. ಆದರೆ 32 ವಿದ್ಯಾರ್ಥಿನಿಯರು ಪರೀಕ್ಷೆ ಬರೆಯದೇ ವಾಪಸಾಗಿದ್ದಾರೆ.

ಇದನ್ನೂ ಓದಿ:ಹಿಜಾಬ್ ತೀರ್ಪು ವಿರೋಧಿಸಿ ಪರೀಕ್ಷೆ ಬಹಿಷ್ಕಾರ: ಮರು ಪರೀಕ್ಷೆ ಸಾಧ್ಯವಿಲ್ಲ- ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌

Last Updated : Mar 22, 2022, 2:22 PM IST

ABOUT THE AUTHOR

...view details