ಕರ್ನಾಟಕ

karnataka

ETV Bharat / city

ಮಂಗಳೂರು ವಿವಿ ಹಿಜಾಬ್ ವಿವಾದ: ಕಾಲೇಜ್​ಗೆ ಬಂದ 12 ವಿದ್ಯಾರ್ಥಿನಿಯರು, ಡಿಸಿ ನಿರ್ಧಾರದ ನಿರೀಕ್ಷೆ - HIJAB CONTROVERSY

ಹಿಜಾಬ್ ಧರಿಸಿಕೊಂಡು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜ್​ಗೆ ಬರಲು ಅನುಮತಿ ನೀಡುವಂತೆ ಪಟ್ಟು ಹಿಡಿದಿರುವ ವಿದ್ಯಾರ್ಥಿನಿಯರು, ಇಂದು ಕಾಲೇಜಿಗೆ ಆಗಮಿಸಿದ್ದು, ಜಿಲ್ಲಾಧಿಕಾರಿ ನಿರ್ಧಾರಕ್ಕಾಗಿ ನಿರೀಕ್ಷಿಸುತ್ತಿದ್ದಾರೆ.

ಮಂಗಳೂರು ವಿವಿ ಹಿಜಾಬ್ ವಿವಾದ
ಮಂಗಳೂರು ವಿವಿ ಹಿಜಾಬ್ ವಿವಾದ

By

Published : May 30, 2022, 11:02 AM IST

Updated : May 30, 2022, 11:12 AM IST

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಸಮವಸ್ತ್ರ ನಿಯಮವನ್ನು ಕಡ್ಡಾಯ ಜಾರಿ ಮಾಡಲಾಗಿದೆ. ಹಿಜಾಬ್ ಧರಿಸಿ ಕಾಲೇಜ್​ಗೆ​ ಆಗಮಿಸಿದ್ದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿನ ಪ್ರಾಂಶುಪಾಲೆ ಡಾ. ಅನುಸೂಯ ರೈ ಹಾಗೂ ಜಿಲ್ಲಾಧಿಕಾರಿ ಭೇಟಿ ಮಾಡಲಿದ್ದಾರೆ.

ಒಮ್ಮೆ ಕಾಲೇಜಿಗೆ ಆಗಮಿಸಿದ ಬಳಿಕ ಮಹಿಳಾ ವಿಶ್ರಾಂತಿ ಕೊಠಡಿಗೆ ತೆರಳಿ ಹಿಜಾಬ್ ತೆಗೆದಿರಿಸಿ ತರಗತಿಗೆ ಮತ್ತು ಕ್ಯಾಂಪಸ್​ಗೆ ಪ್ರವೇಶ ಮಾಡಬೇಕು ಎಂದು ವಿ.ವಿ ಕಾಲೇಜು ಸೂಚಿಸಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಪ್ರಾಂಶುಪಾಲರನ್ನು ಭೇಟಿ ಮಾಡಲು ವಿದ್ಯಾರ್ಥಿನಿಯರು ಆಗಮಿಸಿದ್ದು, ಬಳಿಕ ಜಿಲ್ಲಾಧಿಕಾರಿ ಭೇಟಿಯಾಗಲಿದ್ದಾರೆ.

ಹಿಜಾಬ್ ಧರಿಸಿಕೊಂಡು ಕಾಲೇಜ್​ಗೆ ಆಗಮಿಸಿದ ವಿದ್ಯಾರ್ಥಿನಿಯರು

ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯರು ಈ ಹಿಂದೆ ಜಿಲ್ಲಾಧಿಕಾರಿ ಭೇಟಿ ಮಾಡಿದ್ದ ಸಂದರ್ಭದಲ್ಲಿ ಸೋಮವಾರ ಈ ಬಗ್ಗೆ ತಿಳಿಸುವುದಾಗಿ ಹೇಳಿದ್ದರು. ಹೀಗಾಗಿ, ಇಂದು ಡಿಸಿ ನಿರ್ಧಾರಕ್ಕಾಗಿ ವಿದ್ಯಾರ್ಥಿನಿಯರು ನಿರೀಕ್ಷಿಸುತ್ತಿದ್ದಾರೆ.

ಇದನ್ನೂ ಓದಿ:ಹಿಜಾಬ್​ ಬೆಂಬಲಿಸುವ ಪ್ರಾಧ್ಯಾಪಕರ ವಿರುದ್ಧ ಸಾಕ್ಷ್ಯ ಸಿಕ್ಕಿದರೆ ಕ್ರಮ: ಮಂಗಳೂರು ವಿವಿ ಕುಲಪತಿ

Last Updated : May 30, 2022, 11:12 AM IST

ABOUT THE AUTHOR

...view details