ಕರ್ನಾಟಕ

karnataka

ETV Bharat / city

ಒಣ ಮೀನಿನಿಂದ ಚಟ್ನಿ, ಉಪ್ಪಿನಕಾಯಿ ಉತ್ಪಾದನೆಗಾಗಿ ಹೈಟೆಕ್ ಪಾರ್ಕ್ ನಿರ್ಮಾಣ: ಸಚಿವ ನಾರಾಯಣ ಗೌಡ - ಹೈಟೆಕ್ ಪಾರ್ಕ್

ಮಂಗಳೂರಿನಲ್ಲಿ ಹೆಚ್ಚಾಗಿ ಮೀನು ಸಿಗುತ್ತಿದೆ. ಮಾರಾಟವಾಗದೇ ಉಳಿದ ಮೀನುಗಳನ್ನು ಸೋಲಾರ್ ತಂತ್ರಜ್ಞಾನದಲ್ಲಿ ಒಣ ಮೀನುಗಳಾಗಿ ಉತ್ಪಾದಿಸಿ ಈ ಪ್ರಾಡಕ್ಟ್​​ಗಳನ್ನು ತಯಾರಿಸಲಾಗುವುದು ಎಂದಿದ್ದಾರೆ.

Narayana gowda
ಸಚಿವ ನಾರಾಯಣ ಗೌಡ

By

Published : Feb 26, 2021, 7:57 PM IST

ಮಂಗಳೂರು: ಮಂಗಳೂರಿನಲ್ಲಿ ಒಣ ಮೀನುಗಳ ಉತ್ಪಾದನೆಗಾಗಿ ಹೈಟೆಕ್ ಪಾರ್ಕ್ ನಿರ್ಮಿಸಲು ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ಧರಿಸಲಾಗಿದ್ದು, ಇದರಿಂದ ಚಟ್ನಿ, ಉಪ್ಪಿನಕಾಯಿ ಮೊದಲಾದವುಗಳನ್ನು ತಯಾರಿಸಿ ಮೀನಿಗೆ ಬೇಡಿಕೆ ಸೃಷ್ಟಿಸಲಾಗುವುದು ಎಂದು ಸಚಿವ ಕೆ.ಸಿ ನಾರಾಯಣಗೌಡ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯ ಬಳಿಕ ಮಾತನಾಡಿದ ಅವರು, ಮಂಗಳೂರಿನಲ್ಲಿ ಹೆಚ್ಚಾಗಿ ಮೀನು ಸಿಗುತ್ತಿದೆ. ಮಾರಾಟವಾಗದೇ ಉಳಿದ ಮೀನುಗಳನ್ನು ಸೋಲಾರ್ ತಂತ್ರಜ್ಞಾನದಲ್ಲಿ ಒಣ ಮೀನುಗಳಾಗಿ ಉತ್ಪಾದಿಸಿ ಈ ಪ್ರಾಡಕ್ಟ್​​ಗಳನ್ನು ತಯಾರಿಸಲಾಗುವುದು. ಮಂಗಳೂರಿನ ಫಿಶರಿಸ್​​​ ಕಾಲೇಜಿನಲ್ಲಿ ಹೈಟೆಕ್ ಪಾರ್ಕ್ ನಿರ್ಮಾಣ ಮಾಡುವ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದರು.

ಒಣ ಮೀನಿನಿಂದ ಚಟ್ನಿ, ಉಪ್ಪಿನಕಾಯಿ ಉತ್ಪಾದನೆಗಾಗಿ ಹೈಟೆಕ್ ಪಾರ್ಕ್ ನಿರ್ಮಾಣ

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಯೋಜನೆಗಳಿಗೆ ಬಿಡುಗಡೆಯಾದ 26 ಕೋಟಿ ಅನುದಾನದ ಕಾಮಗಾರಿ ಪೂರ್ಣವಾಗದೇ ಬಾಕಿ ಉಳಿದಿದೆ. ಇದನ್ನು ಮಾರ್ಚ್​ನೊಳಗೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಕ್ರೀಡಾಂಗಣದಲ್ಲಿ ಹೆಣ್ಣು ಮಕ್ಕಳಿಗೆ ಹಾಸ್ಟೆಲ್ ನಿರ್ಮಾಣ ಮಾಡಲು 1.5 ಕೋಟಿ ರೂ. ನೀಡಲಾಗಿದ್ದು ಈ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದರು.

ಇದನ್ನೂ ಓದಿ:ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಮಂಡಳಿಯಾಗಿಸುವ ಪ್ರಸ್ತಾವ ಸರ್ಕಾರದ ಮುಂದಿದೆ: ಸಚಿವ ಕೆ.ಸಿ.ನಾರಾಯಣಗೌಡ

ABOUT THE AUTHOR

...view details